ಬೆಳೆಯುವ ಸಿರಿ ಮೊಳಕೆಯಲ್ಲಿ


ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಜೀವನದ ಅನುಭವದ ಸಾರವಾಗಿದೆ.ಬೆಳೆಯುವ ಸಿರಿ ಮೊಳಕೆಯಲ್ಲಿ”ಎಂಬುದು ಅರ್ಥ ಪೂರ್ಣವಾದ ಗಾದೆ ಮಾತಾಗಿದೆ. ಯಾವುದೇ ಒಂದು ಬೀಜ ಮೊಳಕೆ ಬಿಟ್ಟ ಕೂಡಲೇ ಉತ್ತಮ ಫಸಲು ನಿರೀಕ್ಷಿಸಲು ಸಾಧ್ಯವಿಲ್ಲ. ಅದರ ಆರೈಕೆಯನ್ನು ಚೆನ್ನಾಗಿ ಮಾಡಬೇಕು. ಸರಿಯಾಗಿ ಬೇಕಾದ ಪೋಷಕಾಂಶಗಳನ್ನು ನೀಡಬೇಕು.  ನೀರು ಮತ್ತು ಗೊಬ್ಬರವನ್ನು ಸಮಯಕ್ಕೆ ಸರಿಯಾಗಿ ಬೇಕಾದ ಪ್ರಮಾಣದಲ್ಲಿ ಹಾಕಬೇಕು. ನಂತರ ಚೆನ್ನಾಗಿ   ಮೊಳಕೆಯೊಡೆದ ಸಸಿಗಳನ್ನು ಆರೈಕೆ ಮಾಡಿದಾಗ ಅದು ಸಮೃದ್ದವಾಗಿ ಬೆಳೆದು ಉತ್ತಮ ಫಸಲನ್ನು ಕೊಡಲು ಸಾಧ್ಯ.
         ಅಂತೆಯೇ ಮಕ್ಕಳಿಗೆ ನಾವು ಬಾಲ್ಯದಲ್ಲಿಯೇ ಒಳ್ಳೆಯ ಬುದ್ಧಿ ಹಾಗು ಶಿಸ್ತನ್ನು ಕಲಿಸಬೇಕು. ಸಂಸ್ಕಾರಗಳನ್ನು ನೀಡಬೇಕು. ಅವರ ಆಸಕ್ತಿಗಳನ್ನು ಗಮನಿಸಬೇಕು. ಅದಕ್ಕೆ ಹೆತ್ತವರು ಪ್ರೋತ್ಸಾಹ ನೀಡಿ ಅದನ್ನು ಪೋಷಿಸಿ ಬೆಳೆಸಬೇಕು. ಬೆಳೆಯುವ ಮಕ್ಕಳನ್ನು ಬಾಲ್ಯದಲ್ಲಿಯೇ ಬೇಕಾದಂತೆ ತಿದ್ದಿಕೊಳ್ಳಬೇಕು. ಸರಿ-ತಪ್ಪುಗಳನ್ನು ತಿಳಿಸಿ ಹೇಳಬೇಕು.  “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ” ಎಂಬ ಮಾತಿನಂತೆ ಮಕ್ಕಳನ್ನು ಎಳೆವಯಸ್ಸಿನಲ್ಲೇ ತಿದ್ದಬೇಕು. ಬಾಲ್ಯದಲ್ಲಿ ನಮ್ಮಿಂದ ಎಲ್ಲವನ್ನೂ ಮಗು ಕಲಿತುಕೊಳ್ಳುತ್ತದೆ. ಆದ್ದರಿಂದ ಹಿರಿಯರು ಯಾವತ್ತೂ ಮಕ್ಕಳಿಗೆ ಮಾದರಿಯಾಗಿ ಆದರ್ಶರಾಗಿ ಇರಬೇಕು. ಮಕ್ಕಳ ಗುಣ - ನಡತೆಯನ್ನು ಸದಾ ಅವಲೋಕಿಸುತ್ತಾ ಇರಬೇಕು. ತಪ್ಪು ಕೆಲಸ ಮಾಡಿದಾಗ ತಿದ್ದಿ ಹೇಳಬೇಕು. ಒಳ್ಳೆಯ ಕೆಲಸಗಳಿಗೆ ಹುರಿದುಂಬಿಸಬೇಕು. ಬಾಲ್ಯದಿಂದಲೇ ಸರಿಯಾದ ದಾರಿಯಲ್ಲಿ ನಡೆಯುವಂತೆ ನಾವು ನೋಡಿಕೊಂಡರೆ ಆ ಮಕ್ಕಳು ಯಶಸ್ಸಿನ ಗುರಿಯನ್ನು ತಲುಪಬಹುದು. ಒಳ್ಳೆಯ ಸತ್ಪ್ರಜೆಗಳಾಗಿ ಬಾಳಬಹುದು ಎಂಬುದು ಈ ಗಾದೆಯ ಸಾರಾಂಶವಾಗಿದೆ.
- ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ನಮಗೆ ತಿಳಿಸಿರಿ.

 🙏 ಧನ್ಯವಾದಗಳು 🙏

           




Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

32 ಕಾಮೆಂಟ್‌ಗಳು

  1. ಪೋಷಕರಿಗೆ ಒಳೆಯ ಮಾಹಿತಿ ನೀಡಿದ್ದಾರೆ superb 👌👌👌👌👌❤☺☺☺☺☺😃😃😃😃😃💜💛💚💙💞✌👍

    ಪ್ರತ್ಯುತ್ತರಅಳಿಸಿ
  2. ಗಾದೆಮಾತು ಪೋಸ್ಟ್ ಮಾಡಿದಕ್ಕೆ ಧನ್ಯವಾದಗಳು 🙏🙏

    ಪ್ರತ್ಯುತ್ತರಅಳಿಸಿ
  3. ತುಂಬಾ ಚೆನ್ನಾಗಿದೆ ಈ ಗಾದೆ...ನನ್ನ ಪರಿಚಯ ತುಂಬಾ ಉಪಯುಕ್ತವಾಗಿತು

    ಪ್ರತ್ಯುತ್ತರಅಳಿಸಿ
  4. 👌👌👌👌👌👌👌👌👌👌👌👌👌👌👌👌👌👌👌👌👌👌👌👌👌

    ಪ್ರತ್ಯುತ್ತರಅಳಿಸಿ
  5. 👏👏👏👏👏👏👏🏽👏👏👏👏👏🏻👏🏽👏🏼👏🏿👏👏🏻👏🏽👏🏼👏🏿👏👏🏻👏🏽👏🏼👏🏿👏👏🏻👏🏽👏🏼👏🏿

    ಪ್ರತ್ಯುತ್ತರಅಳಿಸಿ
  6. Gaade tumbha chennagide...innu heege bareyutta Iri🙏🙏exam ge tumbha help aaitu..Dhanyavaadagalu 🙏

    ಪ್ರತ್ಯುತ್ತರಅಳಿಸಿ
  7. ತುಂಬಾ ಚೆನ್ನಾಗಿದೆ👌👌ಇದು ನನಗೆ ತುಂಬಾ ಸಹಾಯ ಮಾಡಿತು ಧನ್ಯವಾದಗಳು🙏🙏

    ಪ್ರತ್ಯುತ್ತರಅಳಿಸಿ
ಕಾಮೆಂಟ್‌‌ ಪೋಸ್ಟ್‌ ಮಾಡಿ
ನವೀನ ಹಳೆಯದು