ದೇಶ ಸುತ್ತಿ ನೋಡು ಕೋಶ ಓದಿ ನೋಡು


https://youtu.be/C9vI-EG_kf8?si=OL8RCRSGMwyBZ2XQ

If you like the content,
Please Like, Share, Comment and Subscribe my YouTube channel.

 ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಜೀವನದ ಅನುಭವದ ಸಾರವಾಗಿದೆ.ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬುವುದು ಒಂದು ಜನಪ್ರಿಯವಾದ ಗಾದೆಮಾತು.ಮನುಷ್ಯನಿಗೆ ಲೋಕಜ್ಞಾನ ಎಂಬುವುದು ಬಹಳ ಮುಖ್ಯ ಎಂಬುದನ್ನು ಈ ಗಾದೆ ಮಾತು ತಿಳಿಸುತ್ತದೆ. ದೇಶವನ್ನು ಸುತ್ತುತ್ತಾ ಹೋದಂತೆ ನಮಗೆ ಅಲ್ಲಿನ ಜನರ  ಸಂಸ್ಕೃತಿ,ಭಾಷೆ, ಆಚಾರ ವಿಚಾರ, ಪದ್ಧತಿಗಳು, ಆಚರಣೆಗಳು, ನಂಬಿಕೆಗಳು ಮುಂತಾದವುಗಳ ಅರಿವು ಉಂಟಾಗುತ್ತದೆ. ದೇಶ ಸುತ್ತುವುದು ಸುಲಭದ ಕೆಲಸವಲ್ಲ. ಅದಕ್ಕೆ ಸಮಯ, ತಾಳ್ಮೆ, ಗುರಿ, ಕೈಯಲ್ಲಿ ಹಣ ಹಾಗೂ ಎಲ್ಲಾ ಭಾಷೆಗಳ ಅರಿವು ಇರಬೇಕಾಗುತ್ತದೆ. ದೇಶ ಸುತ್ತಿ ನೋಡಿದಾಗ ಅದರ ಅನುಭವಗಳು ದೊಡ್ಡದಾಗಿರುತ್ತದೆ . ಇದು ಕೂಡ ಒಂದು ಬಗೆಯ ಜ್ಞಾನಾರ್ಜನೆ ಯಾಗಿದೆ. ಅದರಂತೆ ಕೋಶ ಓದುವುದು ಎಂದರೆ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ಅಧ್ಯಯನ ಮಾಡುವುದು ಎಂದರ್ಥ. ಕೋಶವನ್ನು ಕೈಯಲ್ಲಿ ಹಿಡಿದುಕೊಂಡು ಒಂದೇ ಸ್ಥಳದಲ್ಲಿ ಕೂತು ಓದಬಹುದು. ಪುಸ್ತಕಗಳನ್ನು ಓದುತ್ತ ಹೋದಂತೆ ನಮಗೆ ಅನೇಕ ವಿಷಯಗಳು ಹಾಗೂ ಮಾಹಿತಿಗಳು ದೊರಕುತ್ತದೆ. ದೇಶ ಸುತ್ತಿದಾಗ ಸಿಗುವ ಅನುಭವಗಳು ಕೋಶ ಓದಿದಾಗಲೂ ಸಿಗುತ್ತವೆ.ದೇಶದಲ್ಲಿರುವ ಪ್ರತಿಯೊಂದು ಭಾಷೆಗಳ ಪುಸ್ತಕಗಳನ್ನು ಓದಬೇಕಾದರೆ ನಮಗೆ ಎಲ್ಲಾ ಭಾಷೆಗಳ ಅರಿವಿರಬೇಕು.ಯಾವ ರೀತಿ ದೇಶದ ಪ್ರತಿಯೊಂದು ಭಾಗಗಳನ್ನು ಸುತ್ತುವುದು ಕಷ್ಟ ಸಾಧ್ಯವೋ ಅದೇ ರೀತಿ ದೇಶದ ಎಲ್ಲಾ ಭಾಷೆಗಳ ಪುಸ್ತಕಗಳನ್ನು ಓದುವುದು ಕಷ್ಟಸಾಧ್ಯ. ದೇಶ ಸುತ್ತುವುದರಿಂದ ಕೋಶ ಓದುವುದರಿಂದ ನಮ್ಮ ಇಚ್ಛಾಶಕ್ತಿ,ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿ ಹೆಚ್ಚಾಗಿ ದೇಹ ಮನಸ್ಸುಗಳಲ್ಲಿ ಚೈತನ್ಯ ಶಕ್ತಿ ರೂಪುಗೊಳ್ಳುತ್ತದೆ.
- ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ನಮಗೆ ತಿಳಿಸಿರಿ.

             🙏ಧನ್ಯವಾದಗಳು🙏

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

12 ಕಾಮೆಂಟ್‌ಗಳು

  1. ಇದರಲ್ಲಿ ನೀವು ಬಾಗವನ್ನು ಮಾಡ ಬೇಕಾಗಿತ್ತು
    ಪೀಠಿಕೆ:
    ವಿಷಯದ ಬೆಳವಣಿಗೆ:
    ಉಪಸಂಹಾರ :

    ಪ್ರತ್ಯುತ್ತರಅಳಿಸಿ
ಕಾಮೆಂಟ್‌‌ ಪೋಸ್ಟ್‌ ಮಾಡಿ
ನವೀನ ಹಳೆಯದು