ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ.

If you like the content,
Please Like, Share, Comment and Subscribe my YouTube channel.


ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಜೀವನದ ಅನುಭವದ ಸಾರವಾಗಿದೆ.
 ಕನ್ನಡದಲ್ಲಿ ಅನೇಕ ಗಾದೆಗಳಿವೆ .ಅದರಲ್ಲಿ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬುವುದು ಒಂದು ಪ್ರಸಿದ್ಧವಾದ ಗಾದೆ ಮಾತಾಗಿದೆ. ನಮಗೆಲ್ಲ ಗೊತ್ತಿರುವಂತೆ ಮಡಿಕೆ  ಮಾಡುವುದು ಸುಲಭದ ಕೆಲಸವಲ್ಲ.ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗೆ ತಯಾರಾದ ಮಡಿಕೆಯನ್ನು ತುಂಡು ಮಾಡುವುದು ಅಥವಾ ಹಾಳುಮಾಡುವುದು ತುಂಬಾ ಸುಲಭದ ಕೆಲಸ. ದೊಣ್ಣೆಯಿಂದ ಒಂದು ಪೆಟ್ಟು ಕೊಟ್ಟರೆ ಕ್ಷಣಮಾತ್ರದಲ್ಲಿ ಪುಡಿಪುಡಿಯಾಗಿ ಹೋಗುತ್ತದೆ. ಈ ಮೇಲಿನ ಗಾದೆ ಮಾತಿನ ತಾತ್ಪರ್ಯ ತಿಳಿಯುವುದಾದರೆ ನಾವು ಜೀವನದಲ್ಲಿ ಗಳಿಸುವುದು ತುಂಬಾ ಕಷ್ಟ .ಆದರೆ ಗಳಿಸಿದ್ದನ್ನು ಅಳಿಸುವುದು ಅಷ್ಟೇ ಸುಲಭ.ಪರಿಶ್ರಮಪಟ್ಟು ಕೀರ್ತಿ, ಹೆಸರು, ಹಣ ಎಲ್ಲವನ್ನು ಪಡೆಯಲು ಸದಾ ಪ್ರಯತ್ನಿಸುತ್ತೇವೆ. ಇದಕ್ಕಾಗಿ ಹಣ ಹಾಗೂ ಸಮಯವನ್ನು ವಿನಿಯೋಗಿಸುತ್ತವೆ. ಹಗಲಿರುಳೆನ್ನದೆ ಕಷ್ಟಪಟ್ಟು ಗುರಿಯನ್ನು ತಲುಪುತ್ತೇವೆ. ಯಾವುದೋ ಒಂದು ಸಂದರ್ಭದಲ್ಲಿ ತಪ್ಪು ನಿರ್ಧಾರದಿಂದ ಜೀವನದಲ್ಲಿ ಗಳಿಸಿದ ಯಶಸ್ಸು ,ಕೀರ್ತಿ, ಹೆಸರು, ಹಣ ಎಲ್ಲವೂ ಕ್ಷಣಮಾತ್ರದಲ್ಲಿ ಹಾಳಾಗಿ ಹೋಗುತ್ತದೆ. ನಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕಿ ಅಂಟಿಕೊಳ್ಳುತ್ತದೆ. ಜೀವನದಲ್ಲಿ ಒಳ್ಳೆಯವನೆಂದು  ಕರೆಸಿಕೊಳ್ಳಲು ತುಂಬಾ ಕಷ್ಟ, ಆದರೆ ಕೆಟ್ಟವನೆಂದು ಅನಿಸಿಕೊಳ್ಳಲು ಒಂದು ಕ್ಷಣ ಸಾಕು ಎಂಬುದು ಈ ಗಾದೆ ಮಾತಿನ ಸಾರವಾಗಿದೆ.
- ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ನಮಗೆ ತಿಳಿಸಿರಿ.

             🙏ಧನ್ಯವಾದಗಳು🙏

 

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

7 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ
ನವೀನ ಹಳೆಯದು