ತುಂಬಿದ ಕೊಡ ತುಳುಕುವುದಿಲ್ಲ.

https://youtu.be/CexcqYTT6F0?si=g_5AKz5IXhDKqZra
If you like the content,
Please Like, Share, Comment and Subscribe my YouTube channel.

 ಗಾದೆ ವೇದಕ್ಕೆ ಸಮಾನ ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಯು ಹಿರಿಯರು ಬಿಟ್ಟುಹೋದ ಅನುಭವದ ಸಾರ. ಗಾದೆಗಳು ಒಳಾರ್ಥ ಗಳನ್ನು ಹೊಂದಿರುತ್ತದೆ.

ತುಂಬಿದ ಕೊಡ ತುಳುಕುವುದಿಲ್ಲ ಎಂದರೆ ಕೊಡದಲ್ಲಿ ನೀರು ಪೂರ್ತಿಯಾಗಿ ತುಂಬಿದ್ದರೆ ಅದರಿಂದ ಚೆಲ್ಲುವುದಿಲ್ಲ ಎಂದರ್ಥ. ಆದರೆ ಅದೇ ಕೊಡದಲ್ಲಿ ನೀರು ಅರ್ಧ ತುಂಬಿದ್ದರೆ ಅದು ತುಳುಕುತ್ತದೆ. ಇದರ ಒಳಾರ್ಥ ಏನೆಂದರೆ ತುಂಬಿದ ಕೊಡ ಚೆಲ್ಲದ ರೀತಿಯಲ್ಲೇ ಒಬ್ಬ ಜ್ಞಾನಿಯು ತನ್ನ ಹೆಸರು, ಕೀರ್ತಿ, ಸಾಹಸ, ಸಾಧನೆಗಳನ್ನು ತಾನೇ ಪ್ರಚಾರ ಮಾಡುವುದಿಲ್ಲ. ಅವನು ಪ್ರಚಾರಪ್ರಿಯನಲ್ಲ . ಆದರೆ ತನ್ನ ಸಾಧನೆಗಳಿಂದ ಜನರೇ ತನ್ನನ್ನು ಗುರುತಿಸುವಂತೆ ಮಾಡುತ್ತಾನೆ. ಅವನಲ್ಲಿ ಸ್ವಾರ್ಥವಾಗಲಿ ಅಹಂಕಾರವಾಗಲೀ ಇರುವುದಿಲ್ಲ.

 ಅರೆಬರೆ ತಿಳಿದವನು ತನಗೆ ಅರ್ಧಂಬರ್ಧ ತಿಳಿದ ವಿಷಯಗಳು  ಸಂಪೂರ್ಣವಾಗಿ ಗೊತ್ತಿದೆ ಎಂಬಂತೆ ನಟಿಸುತ್ತಾನೆ. ತಾನೇ ಜ್ಞಾನಿ ಎಂಬ ಅಜ್ಞಾನದಲ್ಲೇ ಇರುತ್ತಾನೆ.  ಇವರು ಪ್ರಚಾರಪ್ರಿಯರಾಗಿರುತ್ತಾರೆ. ಅಹಂಕಾರಿಗಳು ಮತ್ತು ಸ್ವಾರ್ಥಿಗಳಾಗಿ ಬದುಕುತ್ತಾರೆ. ಸದಾ ಸದ್ದು ಮಾಡುತ್ತಾ ಇರುತ್ತಾರೆ. ಸಂಪೂರ್ಣ ಜ್ಞಾನವನ್ನು ಪಡೆದವನು ತನ್ನನ್ನು  ತಾನು ಬಣ್ಣಿಸದೆ ಮೌನಿಯಾಗಿದ್ದು ಪರರಿಗೆ ಉಪಕಾರಿಯಾಗಿ ಬದುಕುತ್ತಾನೆ ಎಂಬುವುದು ಈ ಗಾದೆ ಮಾತಿನ ತಾತ್ಪರ್ಯ.

- ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ನಮಗೆ ತಿಳಿಸಿರಿ.

             🙏ಧನ್ಯವಾದಗಳು🙏  


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

12 ಕಾಮೆಂಟ್‌ಗಳು

  1. IT IS USEFUL TO 10STD SIR.IF I READ I WILL UNDERSTAND AND I CAN WRITE IN OWN ABOUT THIS...

    ಪ್ರತ್ಯುತ್ತರಅಳಿಸಿ
  2. ತಾವು ಈ ಗಾದೆಯನ್ನು ಚೆನ್ನಾಗಿ ಹೇಳಿದ್ದೀರಿ 👌👌👌👍🤟

    ಪ್ರತ್ಯುತ್ತರಅಳಿಸಿ
  3. Thanks a lot ma'am😀
    BECAUSE OF THE SPEECH WRITTEN BY U, I GOT 1st PRIZE 🥳🥳🙏🙏
    SURELY NEXT TIME I WILL ASK U TO WRITE... TEACHERS PRAISED ME A LOT...ITS ALL BECAUSE OF U🙏🙏🙏

    ಪ್ರತ್ಯುತ್ತರಅಳಿಸಿ
  4. ಒಳ್ಳೆಯ ತತ್ವ ಇದು ನಮ್ಮ ಓದಿಗೆ ಸೂಕ್ತ ವಾಗಿದೆ

    ಪ್ರತ್ಯುತ್ತರಅಳಿಸಿ
ಕಾಮೆಂಟ್‌‌ ಪೋಸ್ಟ್‌ ಮಾಡಿ
ನವೀನ ಹಳೆಯದು