https://youtu.be/fU8AuhfzdmQ?si=4wueSk7ViMUOVynf
If you like the content,
Please Like, Share, Comment and Subscribe my YouTube channel.
Please Like, Share, Comment and Subscribe my YouTube channel.
ಗಾದೆಯು ವೇದಕ್ಕೆ ಸಮ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಅನುಭವದ ನುಡಿ ಮುತ್ತುಗಳು.
ಶಕ್ತಿಯಿಂದ ಮಾಡಲಾಗದ್ದನ್ನು ಯುಕ್ತಿಯಿಂದ ಸಾಧಿಸುವ ನಿಟ್ಟಿನಲ್ಲಿ ಶಕ್ತಿಗಿಂತ ಯುಕ್ತಿ ಮೇಲು ಎಂಬ ಗಾದೆಯ ಹುಟ್ಟಿಕೊಂಡಿತ್ತು. ಶಕ್ತಿಯಿಂದ ಸಾಧಿಸಲಾಗದ್ದನ್ನು ಯುಕ್ತಿಯಿಂದ ಸಾಧಿಸಬಹುದು. ಅಪಾಯವನ್ನು ಉಪಾಯದಿಂದ ಗೆಲ್ಲಬೇಕು ಎಂಬ ಗಾದೆ ಮಾತು ಇದೇ ಅರ್ಥವನ್ನು ಕೊಡುತ್ತದೆ ಸಂದರ್ಭಗಳಿಗೆ ತಕ್ಕಂತೆ ಉಪಾಯಗಳನ್ನು ತಂತ್ರಗಳನ್ನು ಹಣೆಯುವುದರಿಂದ ಎಂತಹ ಶತ್ರುಗಳನ್ನಾದರು ಸೋಲಿಸಬಹುದು. ಮಹಾಭಾರತದಲ್ಲಿ ಕೌರವರು ಅತ್ಯಂತ ಶಕ್ತಿಶಾಲಿಗಳಾಗಿದ್ದರು. ಶ್ರೀಕೃಷ್ಣ ಪರಮಾತ್ಮನ ಯುಕ್ತಿಯ ಮುಂದೆ ಕೌರವರ ಆಟ ನಡೆಯಲಿಲ್ಲ. ಯುದ್ಧದಲ್ಲಿ ಸಾವನ್ನಪ್ಪಿದ್ದರು. ಅಕ್ಬರನಿಗೆ ಬೀರಬಲ್ಲನು ಹಾಗು ಕೃಷ್ಣದೇವರಾಯನಿಗೆ ತೆನಾಲಿ ರಾಮನು ಹತ್ತಿರವಾದದ್ದು ಅವರ ಚಾಣಾಕ್ಷತೆಯಿಂದ ಎನ್ನಬಹುದು.
ಸಿಂಹ ಹಾಗು ನರಿಯ ಕತೆಯಲ್ಲೂ ಕೂಡ ನರಿಯು ಯುಕ್ತಿಯಿಂದ ಸಿಂಹವನ್ನು ಬಾವಿಗೆ ಕೆಡವಿ ತನ್ನ ಪ್ರಾಣವನ್ನು ಉಳಿಸಿಕೊಂಡಿತು. ಮನುಷ್ಯರಿಗೆ ಅಥವಾ ಪ್ರಾಣಿಗಳಿಗಾಗಲಿ ಕೇವಲ ಶಕ್ತಿಯೊಂದಿದ್ದರೆ ಸಾಲದು ಯುಕ್ತಿಯು ಗೊತ್ತಿರಬೇಕು ಎಂಬುದು ಈ ಗಾದೆಯ ತಾತ್ಪರ್ಯ.
- ಉಷಾ ಪ್ರಸಾದ್
ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ನಮಗೆ ತಿಳಿಸಿರಿ.
🙏ಧನ್ಯವಾದಗಳು🙏
Thank u very much🙏🙏👏👏👌👌
ಪ್ರತ್ಯುತ್ತರಅಳಿಸಿ