https://youtu.be/_8gVO5Bj6-E?si=2Q2NfZE3TRLlTdqA
ಪೀಠಿಕೆ : ಗ್ರಂಥಾಲಯ ಎನ್ನುವುದು ನಮ್ಮ ಜ್ಞಾನಾಸಕ್ತಿಯನ್ನು ಹೆಚ್ಚಿಸುವ ಜ್ಞಾನ ಮಂದಿರವಾಗಿದೆ. ಇವುಗಳು ನಮ್ಮ ಜ್ಞಾನಾಭಿವೃದ್ಧಿಗೊಳಿಸುವ ಜ್ಞಾನಭಂಡಾರದ ಪುಸ್ತಕಗಳ ಬೃಹತ್ ಸಂಗ್ರಹವಾಗಿದೆ. ಓದುಗರಿಗೆ ಪುಸ್ತಕಗಳು ಹಿತೈಷಿ, ಮಾರ್ಗದರ್ಶಕ ,ಗೆಳೆಯ ಹಾಗು ಗುರುವಿನಂತೆ ದಾರಿದೀಪವಾಗಿತ್ತದೆ.
ವಿಷಯ ವಿವರಣೆ : ನಮ್ಮೆಲ್ಲರ ಜೀವನದಲ್ಲಿ ಪುಸ್ತಕಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಜ್ಞಾನವಿಕಾಸಕ್ಕಾಗಿ ಶಾಲಾ ಗ್ರಂಥಾಲಯಗಳು ಹಾಗೂ ಸಾರ್ವಜನಿಕ ಗ್ರಂಥಾಲಯಗಳು ತೆರೆಯಲ್ಪಟ್ಟಿವೆ. ಶಾಲಾ ಗ್ರಂಥಾಲಯಗಳಿಗೆ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶವಿರುತ್ತದೆ. ಮಕ್ಕಳ ಶೈಕ್ಷಣಿಕ ವಿಷಯಗಳಿಗೆ ಬೇಕಾದ ಪ್ರಸ್ತಕಗಳು ಶಾಲಾ ಗ್ರಂಥಾಲಯದಲ್ಲಿರುತ್ತದೆ. ಸಾರ್ವಜನಿಕ ಗಂಥಾಲಯಗಳಿಗೆ ಎಲ್ಲರಿಗೂ ಪ್ರವೇಶವಿರುತ್ತದೆ. ಅಲ್ಲಿ ನಮಗೆ ಬೇಕಾದ ಪುಸ್ತಕಗಳನ್ನು ಮೇಲ್ವಿಚಾರಕರಿಗೆ ತಿಳಿಸಿ ಪಡೆದುಕೊಳ್ಳಬೇಕು. ಓದಿದ ನಂತರ ನಿಗದಿತ ಸಮಯದೊಳಗೆ ಯಥಾಸ್ಥಿತಿ ಯೊಂದಿಗೆ ಹಿಂತಿರುಗಿಸಬೇಕು. ಇಲ್ಲವಾದರೆ ದಂಡ ವಿಧಿಸಲಾಗುವುದು. ಮನಸ್ಸಿನ ವಿಕಾಸಕ್ಕೆ ಪುಸ್ತಕದ ಓದು ಅವಶ್ಯವಾಗಿದೆ. ಪುಸ್ತಕಗಳನ್ನು ಓದುವ ಹವ್ಯಾಸದಿಂದ ನಮ್ಮ ತಿಳುವಳಿಕೆ ಜಾಸ್ತಿಯಾಗುವುದಲ್ಲದೇ ಒಳ್ಳೆಯ ಆಲೋಚನೆಗಳು ,ಬದುಕಿನ ಬಗ್ಗೆ ಭರವಸೆಗಳು, ಮನಸ್ಸಿನ ನೆಮ್ಮದಿ ಏಕಾಗ್ರತೆಗಳು ಹೆಚ್ಚಾಗುತ್ತದೆ. ಅವರವರ ಆಸಕ್ತಿಗಳಿಗೆ ಸಂಬಂಧಪಟ್ಟಂತಹ ಪುಸ್ತಕಗಳು ಗ್ರಂಥಾಲಯದಲ್ಲಿ ದೊರೆಯುತ್ತದೆ. ಶೈಕ್ಷಣಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿದೆ. ಇಲ್ಲಿ ಕಥೆ, ಕವನ, ನಾಟಕ, ಮಕ್ಕಳ ಸಾಹಿತ್ಯ, ಕಾದಂಬರಿಗಳು, ಕಥೆ ಪುಸ್ತಕಗಳು, ಪ್ರಬಂಧಗಳು, ಜೀವನಚರಿತ್ರೆಗಳು ಮುಂತಾದ ಪುಸ್ತಕಗಳು ಬೇರೆ ಬೇರೆ ಭಾಷೆಗಳಲ್ಲಿ ದೊರೆಯುತ್ತವೆ. ಮಾಸಪತ್ರಿಕೆಗಳು, ವಾರಪತ್ರಿಕೆಗಳು, ದಿನಪತ್ರಿಕೆಗಳು ಸಿಗುತ್ತವೆ. ಎಲ್ಲಾ ವರ್ಗದ ಹಾಗು ಎಲ್ಲಾ ವಯಸ್ಸಿನ ಜನರಿಗೂ ಗ್ರಂಥಾಲಯಗಳು ಬೇಕು. ಓದು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. ಎಲ್ಲಾ ಪುಸ್ತಕಗಳನ್ನು ಹಣಕೊಟ್ಟು ಕೊಂಡುಕೊಳ್ಳುವುದು ಅಸಾಧ್ಯ ಆದರೆ ಗ್ರಂಥಾಲಯಗಳು ಈ ಕೊರತೆಯನ್ನು ನೀಗಿಸುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕೊಳ್ಳಲು ಇ-ಲೈಬ್ರೆರಿ ಗಳನ್ನು ತೆರೆಯಲಾಗಿದೆ.
ಉಪಸಂಹಾರ : ಒಟ್ಟಾರೆಯಾಗಿ ಗ್ರಂಥಾಲಯಗಳು ಪವಿತ್ರ ಸ್ಥಳವಾಗಿದೆ. ಜ್ಞಾನವನ್ನು ಹೆಚ್ಚಿಸುವ ಹಾಗು ಹಂಚುವ ಜ್ಞಾನ ಮಂದಿರವಾಗಿದೆ. ಗ್ರಂಥಾಲಯಗಳು ನಮ್ಮಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸಿ , ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ.
-ಉಷಾ ಪ್ರಸಾದ್.
ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ತಿಳಿಸಿರಿ
🙏ಧನ್ಯವಾದಗಳು 🙏
ಧನ್ಯವಾದಗಳು ಗುರುಗಳೆ
ಪ್ರತ್ಯುತ್ತರಅಳಿಸಿThanks a lot sir
ಪ್ರತ್ಯುತ್ತರಅಳಿಸಿThank you sir 🙏🙏
ಪ್ರತ್ಯುತ್ತರಅಳಿಸಿthank u
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿಗ್ರಂಧಾಲಯವು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲೇ ಇರಬೇಕು ಎಂಬ ಸರ್ಕಾರದ ಆದೇಶ ಇದಿಯಾ.
ಪ್ರತ್ಯುತ್ತರಅಳಿಸಿTq
ಪ್ರತ್ಯುತ್ತರಅಳಿಸಿ