ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ.

For YouTube Explanation...

 ಗಾದೆ ಎಂಬುದು ವೇದಕ್ಕೆ ಸಮಾನ, ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರು ಹೇಳಿದ ಅನುಭವದ ನುಡಿ ಮುತ್ತುಗಳು.

ಒಂದು ಗಿಡವು ಬಾಗಿಕೊಂಡು ಬೆಳೆಯಬೇಕಾದರೆ  ಅದು ಎಳವೆಯಲ್ಲಿರುವಾಗಲೇ ಬಗ್ಗಿಸಬೇಕು. ಗಿಡವು ಮರವಾಗಿ ಬೆಳೆದ ಮೇಲೆ ಬಗ್ಗಿಸಲು ಸಾಧ್ಯವಿಲ್ಲ. ಅದೇ ರೀತಿ ಮಕ್ಕಳಿಗೆ ಬಾಲ್ಯದಲ್ಲೇ ತಿಳಿಹೇಳಿ ಒಳ್ಳೆಯ ಬುದ್ದಿ ಹಾಗೂ ಸಂಸ್ಕಾರಗಳನ್ನು ಕಲಿಸಿ ಅವರ ವ್ಯಕ್ತಿತ್ವವನ್ನು ನಾವು ರೂಪಿಸಲು ನೆರವಾಗಬೇಕು. ಮಕ್ಕಳು ಬೆಳೆದ ಮೇಲೆ ತಿದ್ದುವುದು ಅಸಾಧ್ಯ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಮಾತು ಇದೇ ಅರ್ಥವನ್ನು ಕೊಡುತ್ತದೆ. ಬಾಲ್ಯದಲ್ಲಿ ಹಿರಿಯರು ಹೇಳಿದ್ದನ್ನು ಹಾಗೂ ಕಲಿಸಿದ್ದನ್ನು  ಮಕ್ಕಳು ಬೇಗನೆ ಕಲಿತುಕೊಳ್ಳುತ್ತಾರೆ.  ಹಿರಿಯರ ಮತ್ತು ಹೆತ್ತವರ ನಡೆ-ನುಡಿ ಹಾಗೂ ಸಂಸ್ಕಾರಗಳನ್ನು  ತಮ್ಮಲ್ಲೂ ಅಳವಡಿಸಿಕೊಳ್ಳುತ್ತಾರೆ.  ಈ ಸಂದರ್ಭದಲ್ಲಿ ಹೆತ್ತವರಿಗೆ ಮಕ್ಕಳಲ್ಲಿ ತಪ್ಪು ಕಂಡುಬಂದರೆ ಕೂಡಲೇ ತಿದ್ದಿಕೊಳ್ಳುವಂತೆ ಮಾಡಿ ಸರಿದಾರಿಗೆ ತರಬೇಕು. ಮಗು ಬೆಳೆದು ದೊಡ್ಡವನಾದ ಮೇಲೆ ತಿದ್ದುವುದು ಅಸಾಧ್ಯವಾದ ಮಾತು ಎಂಬುದು ಈ ಗಾದೆಯ ಅರ್ಥ. ಅದೇ ರೀತಿ ಯಾವುದೇ ಸಮಸ್ಯೆಗಳಿರಲಿ ಅದು ಸಣ್ಣದಿರುವಾಗಲೇ ಪರಿಹಾರ ಕಂಡುಹುಡುಕಿಕೊಳ್ಳಬೇಕು. ಸಮಸ್ಯೆ ಬೆಳೆದು ಹೆಮ್ಮರವಾದರೆ ಪರಿಹರಿಸುವುದು ಕಷ್ಟ ಎಂಬುದು ಕೂಡ ಈ ಗಾದೆ ಮಾತಿನ ತಾತ್ಪರ್ಯ.

- ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ನಮಗೆ ತಿಳಿಸಿರಿ.

             🙏ಧನ್ಯವಾದಗಳು🙏



Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

11 ಕಾಮೆಂಟ್‌ಗಳು

  1. ಈ ಗಾದೆ ನನಗೆ ಬಹಳ ಮುಖ್ಯವಾಗಿತ್ತು ಬಹಳ ಚೆನ್ನಾಗಿದೆ... 🙏🏻

    ಪ್ರತ್ಯುತ್ತರಅಳಿಸಿ
ಕಾಮೆಂಟ್‌‌ ಪೋಸ್ಟ್‌ ಮಾಡಿ
ನವೀನ ಹಳೆಯದು