ವೀರ ಸಾವರ್ಕರ್


 ಟಿಪ್ಪಣಿ:
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಹಾಗು ರಾಷ್ಟ್ರೀಯವಾದಿ ನಾಯಕರಾಗಿದ್ದ ವಿನಾಯಕ ದಾಮೋದರ್ ಸಾವರ್ಕರ್ ಅವರು ಮೇ 28 ಕ್ರಿ.ಶ 1883ರಲ್ಲಿ ಮಹಾರಾಷ್ಟ್ರದ ಭಗೂರಿನಲ್ಲಿ ಜನಿಸಿದರು.ತಂದೆ ದಾಮೋದರ ಪಂತ್ ಸಾವರ್ಕರ್, ತಾಯಿ ರಾಧಾಬಾಯಿ.ತನ್ನ ಒಂಬತ್ತನೇ ವಯಸ್ಸಿನಲ್ಲಿ ತಾಯಿಯು ಅಗಲಿದರು. ನಂತರ ತಂದೆಯ ಆರೈಕೆಯಲ್ಲಿ ಬೆಳೆದರು 16ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು.. ಬಾಲ್ಯದಲ್ಲೇ ಶ್ರದ್ಧೆ, ಸಾಹಸ, ಮತ್ತು ಬಲಿಷ್ಠ ಆದರ್ಶಗಳೊಂದಿಗೆ ಸ್ವಾತಂತ್ರ್ಯದ ಕನಸನ್ನು ಹೊತ್ತಿದ್ದರು. ಸ್ವಾತಂತ್ರ್ಯವನ್ನು ಕೇವಲ ಹೋರಾಟದ ಗುರಿಯಷ್ಟೇ ಅಲ್ಲ, ಜೀವನದ ಪರಮೋದ್ದೇಶವೆಂದು ಪರಿಗಣಿಸಿದ ಅವರು, ಬ್ರಿಟಿಷರ ವಿರುದ್ದ ನಡೆಯುವ ಕ್ರಾಂತಿಗಳಿಗೆ ಪ್ರಮುಖ ಶಕ್ತಿಯಾಗಿದ್ದರು.

 ವಿಷಯ ವಿವರಣೆ :

ಲೋಕಮಾನ್ಯ ಬಾಲಗಂಗಾಧರ ತಿಲಕರ 'ಕೇಸರಿ 'ಪತ್ರಿಕೆಯ ಬರಹಗಳಿಂದ ಪ್ರಭಾವಿತರಾದರು. ಜಾತೀಯತೆ  ,ಅಸ್ಪೃಶ್ಯತೆ ಯಂತಹ  ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ನಡೆಸಿದರು.ಕಾನೂನು ಪದವಿಗಾಗಿ ಕ್ರಿ ಶ1906ರಲ್ಲಿ ಲಂಡನಿಗೆ ತೆರಳಿ ಅಲ್ಲಿ ಕಾನೂನು ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಪಾಸಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇವರು ವಿದ್ಯಾರ್ಥಿ ದೆಸೆಯಲ್ಲಿ ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸುತ್ತಿದ್ದರು.ನಂತರ 'ತಿಲಕ್ ಸ್ವರಾಜ್ 'ಪಕ್ಷದ ಸದಸ್ಯರಾದರು.ಕ್ರಿಸ್ತಶಕ1904 ರಲ್ಲಿ 'ಅಭಿನವ ಭಾರತ್' ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಸ್ಥಾಪಿಸಿದರು. ಸಾವರ್ಕರ್ ಅವರ ಈ ಚಟುವಟಿಕೆಗಳನ್ನು ಗಮನಿಸಿದ ಬ್ರಿಟಿಷ್ ಸರಕಾರ ಅವರನ್ನು ಕ್ರಿ.ಶ.1910 ರಲ್ಲಿ  ಲಂಡನಿನಲ್ಲಿ ಬಂಧಿಸಿ,ಹಡಗಿನ ಮೂಲಕ ಭಾರತಕ್ಕೆ ಅವರನ್ನು ಕರೆತರಲಾಗುತ್ತಿತ್ತು.ಮಾರ್ಸೈಲೆಸ್ ಬಂದರಿನಲ್ಲಿ ಹಡಗು ಬಂದು ನಿಂತಾಗ ,ಅವರಿಂದ ತಪ್ಪಿಸಿಕೊಂಡು ಸಮುದ್ರಕ್ಕೆ ಹಾರಿ ಈಜಿ ದಡ ಸೇರಿದರು ಆದರೆ ನಂತರ ಫ್ರಾನ್ಸ್ ಸೇನೆಗೆ ಶರಣಾದರು. ಸಾವರ್ಕರ್ ಅವರನ್ನು ಅಂಡಮಾನಿನ ಕಾಲೇಪಾನಿ ಜೈಲಿನಲ್ಲಿ ಇರಿಸಲಾಯಿತು. ಅಲ್ಲಿ ಅವರು ತಾವು ಜೈಲಿನಲ್ಲಿ ಅನುಭವಿಸಿದ ಚಿತ್ರಹಿಂಸೆಯ ಕುರಿತು ಹಾಗೂ ಜೈಲು ಜೀವನದ ಬಗ್ಗೆ 'ಮೇರಾ ಲೈಫ್ ಜೈಲ್ ' ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ .ಕ್ರಿಸ್ತಶಕ 1921 ರಲ್ಲಿ ಅವರನ್ನು ಕಾಲೇಪಾನಿ ಜೈಲಿನಿಂದ ರತ್ನಗಿರಿ ಜೈಲಿಗೆ ವರ್ಗಾಯಿಸಲಾಯಿತು.ಕ್ರಿಸ್ತಶಕ 1937 ರಲ್ಲಿ ಜೈಲುವಾಸದಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದಿದರು.ಸ್ವಾತಂತ್ರ ಹೋರಾಟಗಾರರಾಗಿದ್ದ ಭಗತ್ ಸಿಂಗ್ ಸುಖದೇವ್ ರಾಜ್ ಗುರು ಇವರಿಗೆ ಸಾವರ್ಕರ್ ಅವರು ಪ್ರೇರಣೆಯಾಗಿದ್ದರು.

ಕ್ರಿಸ್ತ ಶಕ  1948 ರಲ್ಲಿ ಗಾಂಧೀಜಿಯ ಹತ್ಯೆಯಾದಾಗ ಇವರ ಕೈವಾಡವಿದೆ ಎನ್ನಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ನಿರಪರಾಧಿ ಎಂದು ಸಾಬೀತಾಯಿತು.'ನನಗೆ ಬ್ರಿಟಿಷರನ್ನು ಕಂಡರೆ ಭಯವಿಲ್ಲ , ನನಗೆ ಮುಸಲ್ಮಾನರನ್ನು ಕಂಡರೆ ಭಯವಿಲ್ಲ ,ಆದರೆ ನನಗೆ ಭಯವಾಗುವುದು ಹಿಂದುತ್ವವನ್ನು ವಿರೋಧಿಸುವ ಹಿಂದುಗಳನ್ನು ನೋಡಿದಾಗ ' ಎಂದು ಹೇಳಿದ ಸಾವರ್ಕರ್ ಅವರ ಮಾತನ್ನು ನಾವು ಈಗಲಾದರೂ ಅರ್ಥಮಾಡಿಕೊಳ್ಳಬೇಕು.ಅವರು ಹಿಂದುತ್ವ ತತ್ವವನ್ನು ರೂಪಿಸಿದರು. ಇದು ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಪುನಶ್ಚೇತನದ ಆಲೋಚನೆಯಾಗಿತ್ತು .ಹಿಂದುತ್ವ: 'ಹೂ ಇಸ್ ಅ ಹಿಂದೂ ?'( 1923 ) ಎಂಬ ಕೃತಿ ಹಿಂದುತ್ವದ ಕುರಿತು ಮಾಹಿತಿ ನೀಡಲು ಪ್ರಮುಖ ತತ್ವ ಗ್ರಂಥವಾಗಿದೆ . ಸಾವರ್ಕರ್ ರ 'ನನ್ನ ಜೀವಾವಧಿ ಶಿಕ್ಷೆ 'ಹಾಗೂ" 1957ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 'ಪ್ರಸಿದ್ಧ ಕೃತಿಗಳು .ಅವರು ಅಂಡಮಾನ್ ಜೇಲಿನಲ್ಲಿದ್ದಾಗ ಭಾರತ ಮಾತೆಯ ಬಗ್ಗೆ ಹತ್ತು ಸಾವಿರ ಕವನಗಳನ್ನು ಬರೆದು ದೇಶಪ್ರೇಮವನ್ನು ಮೆರೆದರು .ಫೆಬ್ರವರಿ 26 1966 ರಂದು ಅನಾರೋಗ್ಯದಿಂದ ನಿಧನರಾದರು.

ಉಪಸಂಹಾರ

ಇವರ ಹಿಂದುತ್ವ ತತ್ವ ಇಂದಿಗೂ ಹಲವರ ವಿಚಾರಧಾರೆಗೆ ಪ್ರಭಾವ ಬೀರುತ್ತದೆ ಅವರು ರೂಪಿಸಿದ ಕ್ರಾಂತಿಕಾರಿ ಚಿಂತನೆಗಳು ದೇಶಪ್ರೇಮ ಮತ್ತು ತ್ಯಾಗದ ತತ್ವಗಳು ಅನೇಕ ಜನರಿಗೆ ಪ್ರೇರಣೆಯಾಗಿದೆ ಬ್ರಿಟಿಷರ ವಿರುದ್ಧ ಉಗ್ರ ಹೋರಾಟ ನಡೆಸಿ ತಮ್ಮ ದೇಶಭಕ್ತಿಯ ಮೂಲಕ ದೇಶದ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.

                                                 - ಉಷಾ ಪ್ರಸಾದ್


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು