ಸಂಪರ್ಕ ಮಾಧ್ಯಮ


 ಪೀಠಿಕೆ: ನಮ್ಮ ಪರಿಸರ, ನಾಡು, ರಾಜ್ಯ, ದೇಶ ಹಾಗೂ ಪ್ರಪಂಚದಲ್ಲಿ ನಡೆಯುವ ಎಲ್ಲ ಆಗುಹೋಗುಗಳು ಜನರಿಂದ ಜನರಿಗೆ ತಿಳಿಯಬೇಕಾದರೆ ಸಂಪರ್ಕ ಮಾಧ್ಯಮಗಳು ಅನಿವಾರ್ಯವಾಗಿದೆ. ಸಂಪರ್ಕ ಮಾಧ್ಯಮದಿಂದ ಇಂದು ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆದ ಘಟನೆಯು ಕ್ಷಣಮಾತ್ರದಲ್ಲಿ ನಮ್ಮ ಕಣ್ಣಮುಂದೆ ಕಾಣಿಸುತ್ತದೆ, ಕೇಳಿಸುತ್ತದೆ.

  ವಿಷಯವಿವರಣೆ:ಹಿರಿಯರು ದಿನನಿತ್ಯದ ವಿದ್ಯಮಾನಗಳನ್ನು ತಿಳಿಯಲು ವರ್ತಮಾನ ಪತ್ರಿಕೆಗಳು ಹಾಗೂ ರೇಡಿಯೋಗಳನ್ನು ಬಳಸುತ್ತಿದ್ದರು. ವಿಷಯಗಳನ್ನು ನಮ್ಮ ಸಂಬಂಧಿಕರಿಗೆ, ಮಿತ್ರರಿಗೆ ತಿಳಿಸಲು ಅಂಚೆ ಕಾರ್ಡುಗಳನ್ನು ಟೆಲಿಗ್ರಾಂಗಳನ್ನು ಉಪಯೋಗಿಸುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ, ಇದು ಕಂಪ್ಯೂಟರ್ ಯುಗ. ಸಂಪರ್ಕ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆದವು. ದೂರದರ್ಶನ, ಸ್ಥಿರದೂರವಾಣಿ, ಸಂಚಾರಿ ದೂರವಾಣಿಗಳು, ಸಾಮಾಜಿಕ ಅಂತರ್ಜಾಲಗಳು, ಕಂಪ್ಯೂಟರ್ಗಳು ಬಳಕೆಗೆ ಬಂದವು. ರೇಡಿಯೋ ಮೂಲಕ ವಿಷಯಗಳನ್ನು ಕೇಳಿಸಿಕೊಳ್ಳುತ್ತಿದ್ದ ಜನರು ದೂರದರ್ಶನದ ಮೂಲಕ ಚಿತ್ರಗಳನ್ನು ವೀಕ್ಷಿಸಲು ಪ್ರಾರಂಭಿಸಿದರು. ಪತ್ರಗಳ ಮೂಲಕ ವ್ಯವಹರಿಸುತ್ತಿದ್ದ ಬಂಧುಮಿತ್ರರು ಮೆಸೇಜುಗಳ ಮೂಲಕ ಟೆಲಿಫೋನ್ ಮತ್ತು ಮೊಬೈಲ್ ಗಳಿಂದ ನೇರ ಸಂಭಾಷಣೆಯ ಮೂಲಕ ಹತ್ತಿರವಾದರು. ಅಂತರ್ಜಾಲದ ಮೂಲಕ ಜನರು ವಿಷಯಗಳನ್ನು ಹರಿಯಬಿಡಲು ಪ್ರಾರಂಭಿಸಿದರು. ಫೇಸ್ಬುಕ್ ಹಾಗೂ ವಾಟ್ಸಪ್ ಗಳು ಮಕ್ಕಳಿಂದ ಹಿಡಿದು ವೃದ್ಧರ ತನಕ ಜನಪ್ರಿಯವಾದ ಸಂಪರ್ಕ ಸಾಧನವಾಗಿದೆ.

ಒಟ್ಟಿನಲ್ಲಿ ಇಂದು ಸಂಪರ್ಕ ಮಾಧ್ಯಮಗಳ ಮೂಲಕ ಪ್ರಪಂಚ ಕಿರಿದಾಗಿ ಕಾಣಿಸುತ್ತಿದೆ. ಅತಿಯಾದ ಟಿವಿ, ಮೊಬೈಲ್, ಕಂಪ್ಯೂಟರ್ ಬಳಕೆಯು ಹಾನಿಕಾರಕ ಎಂಬುದನ್ನು ಅರಿತುಕೊಳ್ಳಬೇಕು.

ಉಪಸಂಹಾರ:ದೇಶದೆಲ್ಲೆಡೆ ಸಂಪರ್ಕ ಮಾಧ್ಯಮಗಳು ಬಹುದೊಡ್ಡ ಕ್ರಾಂತಿಯನ್ನೇ ಮಾಡುತ್ತಿದೆ. ಸಮಾಜದ ಹುಳುಕುಗಳನ್ನು ಬಯಲಿಗೆಳೆಯುತ್ತದೆ. ಸಮಾಜಮುಖಿಯಾಗಿ ದುಡಿಯುತ್ತಿದೆ. ಸಮಾಜ ಮತ್ತು ಜನರ ನಡುವಿನ ಕೊಂಡಿಯಾಗಿ ಕಾರ್ಯ  ನಿರ್ವಹಿಸುತ್ತಿದೆ.


-ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.

  

     🙏ಧನ್ಯವಾದಗಳು 🙏



Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು