https://youtu.be/xDywEneaOFw?si=GN0iPoKaIhJk4_qf
ವಿಷಯ ವಿವರಣೆ: ದೂರದರ್ಶನವಿಲ್ಲದ ಮನೆಗಳು ಕಡಿಮೆ ಎಂದೇ ಹೇಳಬಹುದು. ಇದೊಂದು ಮನರಂಜನೆಯ ಸಾಧನವಾಗಿದೆ. ದೂರದರ್ಶನ ಎಂಬ ಮಾಯ ಪೆಟ್ಟಿಗೆಯೊಳಗೆ ಹಲವಾರು ಭಾಷೆಯ ಚಾನಲ್ ಗಳು ದೊರೆಯುತ್ತದೆ.ಮಕ್ಕಳು,ಯುವಕರು,ಯುವತಿಯರು,ಪುರುಷರು, ಮಹಿಳೆಯರು ,ವೃದ್ಧರು ಹೀಗೆ ಎಲ್ಲಾ ವರ್ಗದ ಜನರನ್ನು ಈ ಮಾಯಾಪೆಟ್ಟಿಗೆಯು ಆಕರ್ಷಿಸಿದೆ. ಪ್ರತಿಯೊಂದು ಚಾನೆಲ್ಗಳಲ್ಲೂ ಬೇರೆ ಬೇರೆ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುತ್ತದೆ. ವಾರ್ತಾ ಚಾನೆಲ್ ಗಳು 24 ಗಂಟೆಯೂ ಸುದ್ದಿಯನ್ನು ಬಿತ್ತರಿಸುತ್ತಿರುತ್ತದೆ. ಮನರಂಜನಾ ಚಾನೆಲ್ ನಲ್ಲಿ ಧಾರವಾಹಿಗಳು, ಸಿನೆಮಾಗಳನ್ನು ಪ್ರಸಾರ ಮಾಡಲಾಗುತ್ತದೆ. ಮಾತ್ರವಲ್ಲದೆ ಕೃಷಿ ವಿಚಾರಗಳು, ಚರ್ಚೆಗಳು ರಸಪ್ರಶ್ನೆಗಳು ಸಂಗೀತ , ನೃತ್ಯ ಹೀಗೆ ಹಲವಾರು ಕಾರ್ಯಕ್ರಮಗಳು, ದೂರದರ್ಶನದಲ್ಲಿ ಪ್ರಸಾರ ವಾಗುತ್ತದೆ. ದೂರದರ್ಶನದಿಂದ ನಮಗೆ ದೇಶ-ವಿದೇಶದ ಸುದ್ದಿಯು ಕ್ಷಣಕ್ಷಣವೂ ದೊರೆಯುತ್ತದೆ. ಕ್ರಿಕೆಟ್, ಹಾಕಿ ಮುಂತಾದ ಪಂದ್ಯಾಟಗಳನ್ನು ನೇರ ಪ್ರಸಾರದ ಮೂಲಕ ಮನೆಯಲ್ಲೇ ಕುಳಿತು ನೋಡಬಹುದು. ಟಿವಿಯಲ್ಲಿ ಬರುವ ಕಾರ್ಟೂನ್ ಚಿತ್ರಗಳು ಮಕ್ಕಳಿಗೆ ಮನರಂಜನೆಯನ್ನು ಕೊಡುತ್ತದೆ. ಪ್ರತಿಭೆಗಳಿಗೂ ದೂರದರ್ಶನವು ಒಂದು ವೇದಿಕೆಯಾಗಿದೆ. ತಮ್ಮ ಪ್ರತಿಭೆಗಳ ಅನಾವರಣಕ್ಕೆ ಸಹಕಾರಿಯಾಗಿದೆ. ಒಟ್ಟಿನಲ್ಲಿ ಇಡೀ ಪ್ರಪಂಚವನ್ನೇ ದೂರದರ್ಶನವೆಂಬ ಪೆಟ್ಟಿಗೆಯ ಮೂಲಕ ಮನೆಮಂದಿಯಲ್ಲಾ ಕುಳಿತು ನೋಡಬಹುದು
ದೂರದರ್ಶನವು ಮೂರ್ಖರ ಪೆಟ್ಟಿಗೆ ಎಂಬ ನಿಂದನೆಗೆ ಗುರಿಯಾಗಿದೆ. ಮಕ್ಕಳು ಟಿವಿ ನೋಡುವುದರಿಂದ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ದೂರದರ್ಶನ ವಿಕ್ಷಣೆಯಿಂದ ಒಳ್ಳೆಯ ಹಾಗು ಕೆಟ್ಟ ಪರಿಣಾಮಗಳೂ ಉಂಟಾಗುತ್ತದೆ.ಸಮಯವು ಹಾಳಾಗುವುದರ ಜೊತೆಗೆ ಜನರನ್ನು ಇದು ಸೋಮಾರಿಗಳನ್ನಾಗಿ ಮಾಡುತ್ತಿದೆ. ಜನರ ಪುಸ್ತಕ ಓದುವ ಹವ್ಯಾಸವನ್ನು ಈ ಟಿವಿ ಮಾಧ್ಯಮ ಕೊಲ್ಲುತ್ತಿದೆ. ಮಕ್ಕಳು ಅತಿಯಾಗಿ ಟಿವಿ ನೋಡುವುದರಿಂದ ಕ್ರಿಯಾಶೀಲತೆಯ ನಾಶದ ಜೊತೆಗೆ ಮೆದುಳಿಗೂ ಹಾಗು ಕಣ್ಣಿಗೂ ಹಾನಿಯಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಮಕ್ಕಳ ಮನಸ್ಸಿನ ಮೇಲೂ ಇದರ ದುಷ್ಪರಿಣಾಮ ಗೋಚರವಾಗುತ್ತದೆ.
ಉಪಸಂಹಾರ: ದೂರದರ್ಶನದ ವೀಕ್ಷಣೆಯಿಂದಾಗುವ ಒಳಿತು-ಕೆಡುಕುಗಳ ಅರಿವು ನಮಗಿರಬೇಕು. ಅತಿಯಾದರೆ ಅಮೃತವೂ ವಿಷವೇ ಆಗಿದೆ. ಅದರಿಂದ ಹಿತಮಿತವಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ವೀಕ್ಷಿಸುವುದು ಉತ್ತಮವಾಗಿದೆ.
-ಉಷಾ ಪ್ರಸಾದ್
ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.
🙏ಧನ್ಯವಾದಗಳು 🙏