ಕನ್ನಡ ಅಕ್ಷರಮಾಲೆ


 

ಕನ್ನಡ ಅಕ್ಷರಗಳ ಕ್ರಮಬದ್ಧವಾದ ಜೋಡಣೆಯನ್ನು ವರ್ಣಮಾಲೆ ಅಥವಾ ಅಕ್ಷರಮಾಲೆ ಎನ್ನುತ್ತಾರೆ.ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ.

ಅವುಗಳು ಯಾವುದೆಂದರೆ:

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅ:

    ಕ ಖ ಗ ಘ ಙ

    ಚ ಛ ಜ ಝ ಞ

    ಟ ಠ ಡ ಢ ಣ

    ತ ಥ ದ ಧ ನ

    ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ

ವರ್ಣಮಾಲೆಯಲ್ಲಿ ವಿಧಗಳು

ಕನ್ನಡ ವರ್ಣಮಾಲೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.

1. ಸ್ವರಗಳು

2. ವ್ಯಂಜನಗಳು

3. ಯೋಗವಾಹಗಳು

1.ಸ್ವರಗಳು

ಸ್ವರಗಳೆಂದರೆ ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳು.ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಾಕ್ಷರ ಗಳಿವೆ.

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ಸ್ವರಗಳನ್ನು ಮುಖ್ಯವಾಗಿ  3 ವಿಭಾಗಗಳಾಗಿ ವಿಂಗಡಿಸಲಾಗಿದೆ. 

1. ಹ್ರಸ್ವಸ್ವರ  2. ದೀರ್ಘಸ್ವರ 3 ಪ್ಲುತಸ್ವರ

1 .ಹ್ರಸ್ವಸ್ವರಗಳಲ್ಲಿ ಒಟ್ಟು 6 ಅಕ್ಷರಗಳು  ಅ ಇ ಉ ಋ ಎ ಒ

ಇವುಗಳು ಒಂದು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳು.

2. ದೀರ್ಘ ಸ್ವರಗಳಲ್ಲಿ ಒಟ್ಟು 7 ಅಕ್ಷರಗಳಿವೆ.ಆ ಈ ಊ ಏ ಐ ಓ ಔ

ಇವುಗಳು ಎರಡು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳು.

3. ಎರಡು ಮಾತ್ರ ಕಾಲಾವಧಿಗಿಂತ ಹೆಚ್ಚು ಕಾಲಾವಧಿಯಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನುವರು. 

ಉದಾ:ಆಮ್ಮಾss,ದೇವರೇss

2 ವ್ಯಂಜನಗಳು

ಸ್ವರಗಳ ಸಹಾಯದಿಂದ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ವ್ಯಂಜನಗಳು ಎನ್ನುತ್ತಾರೆ. ಕನ್ನಡ ವರ್ಣಮಾಲೆಯಲ್ಲಿ ಒಟ್ಟು 34 ವ್ಯಂಜನಾಕ್ಷರಗಳಿವೆ.

ವ್ಯಂಜನಗಳಲ್ಲಿ ಎರಡು ವಿಧ

1 ವರ್ಗಿಯ ವ್ಯಂಜನಗಳು

2 ಅವರ್ಗೀಯ ವ್ಯಂಜನಗಳು

1.ವರ್ಗಿಯ ವ್ಯಂಜನಗಳು

ದಿಂದ ವರೆಗಿನ 25 ಅಕ್ಷರಗಳನ್ನು ವರ್ಗಿಯ ವ್ಯಂಜನ ಎನ್ನುವರು. ಅವುಗಳೆಂದರೆ,

ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ವರ್ಗಿಯ ವ್ಯಂಜನಗಳಲ್ಲಿ ಮೂರು ವಿಧ

1. ಅಲ್ಪಪ್ರಾಣ 

ಕಡಿಮೆ ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರಗಳನ್ನು ಅಲ್ಪಪ್ರಾಣ ಎನ್ನುವರು. ಒಟ್ಟು 10 ಅಲ್ಪಪ್ರಾಣಗಳಿವೆ. ಅವುಗಳೆಂದರೆ

ಕ ಚ ಟ ತ ಪ

ಗ ಜ ಡ ದ ಬ

2 ಮಹಾಪ್ರಾಣ

 ಹೆಚ್ಚು ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರಗಳನ್ನು ಮಹಾಪ್ರಾಣ ಎನ್ನುವರು.ಒಟ್ಟು 10 ಮಹಾಪ್ರಾಣಾಕ್ಷರಗಳಿವೆ.

ಅವುಗಳೆಂದರೆ

ಖ ಛ ಠ ಥ ಫ

ಘ ಝ ಢ ಧ ಭ

 3 ಅನುನಾಸಿಕ 

ಮೂಗಿನ ಸಹಾಯದಿಂದ ಉಚ್ಚರಿಸುವ ವ್ಯಂಜನಾಕ್ಷರಗಳನ್ನು ಅನುನಾಸಿಕ ಎನ್ನುವರು. ಒಟ್ಟು  5 ಅನುನಾಸಿಕಾಕ್ಷರಗಳಿವೆ. ಅವುಗಳೆಂದರೆ

ಙ ಞ ಣ ನ ಮ

ಅವರ್ಗೀಯ ವ್ಯಂಜನಗಳು 

ದಿಂದ ವರೆಗೆ 9 ಅಕ್ಷರಗಳನ್ನು ಅವರ್ಗೀಯ ವ್ಯಂಜನ ಎನ್ನುವರು. ಅವುಗಳೆಂದರೆ,

ಯ ರ ಲ ವ ಶ ಷ ಸ ಹ ಳ

ಯೋಗವಾಹಗಳು 

ಯಾವುದಾದರೂ ಒಂದು ಅಕ್ಷರ ಸಂಬಂಧದಿಂದ ಉಚ್ಚರಿಸಲ್ಪಡುವುದನ್ನು ಯೋಗವಾಹಗಳು ಎನ್ನುವರು. ಇವುಗಳಿಗೆ ಸ್ವತಂತ್ರವಾದ ಉಚ್ಚಾರವಿಲ್ಲ. 'ಯೋಗ'ವೆಂದರೆ ಸಂಬಂಧವೆಂದು 'ವಾಹ' ಎಂದರೆ ಹೊಂದಿದ ಎಂದು ಅರ್ಥ. ಯೋಗವಾಹ ಎಂದರೆ ಸಂಬಂಧ ಹೊಂದಿದ ಎಂದು ಅರ್ಥ.

ಯೋಗವಾಹ ವನ್ನು 2 ವಿಭಾಗ ಮಾಡಲಾಗಿದೆ

1. ಅನುಸ್ವಾರ ಅಂ

2 .ವಿಸರ್ಗ ಅ:

ಗುಣಿತಾಕ್ಷರಗಳು

ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಉಂಟಾಗುವ ಅಕ್ಷರಗಳನ್ನು ಗುಣಿತಾಕ್ಷರ ಎನ್ನುವರು.

ಉದಾ: ಕ್+ಅ=ಕ

             ಕ್+ಆ=ಕಾ

             ಕ್+ಇ=ಕಿ

             ಕ್+ಈ=ಕೀ

             ಕ್+ಉ=ಕು

             ಕ್+ಊ=ಕೂ

             ಕ್+ಋ=ಕೃ

              ಕ್+ಎ=ಕೆ

              ಕ್+ಏ=ಕೇ

              ಕ್+ಐ=ಕೈ

              ಕ್+ಒ=ಕೊ

              ಕ್+ಓ=ಕೋ

              ಕ್+ಔ=ಕೌ

              ಕ್+ ಅಂ=ಕಂ

              ಕ್ +ಅ:=ಕ:

ಸಂಯುಕ್ತಾಕ್ಷರಗಳು

ಎರಡು ಅಥವಾ ಹೆಚ್ಚು ವ್ಯಂಜನಗಳು ಕಾಲ ವಿಳಂಬವಿಲ್ಲದೆ ಸೇರಿದಾಗ ಉಂಟಾಗುವ ಅಕ್ಷರವನ್ನು ವ್ಯಂಜನಾಕ್ಷರಗಳು ಎನ್ನುವರು.

ಉದಾ:   ಕನ್ನಡ    ನ್+ನ್+ಅ=ನ್ನ

               ಅಣ್ಣ  ಣ್+ಣ್+ಅ=ಣ್ಣ

ಸಂಯುಕ್ತಾಕ್ಷರ ಗಳಲ್ಲಿ ಎರಡು ವಿಧ

1 .ಸಜಾತಿಯ ಸಂಯುಕ್ತಕರಗಳು

ಒಂದು ವ್ಯಂಜನಾಕರಕ್ಕೆ ಅದೇ ವ್ಯಂಜನಾಕ್ಷರ ಸೇರಿ ಆಗುವ ಅಕ್ಷರಕ್ಕೆ ಸಜಾತಿ ವ್ಯಂಜನಾಕ್ಷರ ಎನ್ನುವರು.

ಉದಾ:ಅಕ್ಕ=ಕ್+ಕ್+ಅ=ಕ್ಕ

            ಅಮ್ಮ=ಮ್+ಮ್+ಅ=ಮ್ಮ

 2 .ವಿಜಾತಿಯ ಸಂಯುಕ್ತಕ್ಷರಗಳು

ಒಂದು ವ್ಯಂಜನಾಕ್ಷರಕ್ಕೆ ಬೇರೊಂದು ವ್ಯಂಜನಾಕ್ಷರ ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಾಕ್ಷರಗಳು ಸೇರಿ ಆಗುವ ಅಕ್ಷರಗಳನ್ನು ವಿಜಾತಿಯ ವ್ಯಂಜನಾಕ್ಷರ ಎನ್ನುವರು.

ಉದಾ: ಅಕ್ಷರ=ಕ್+ಷ್+ಅ=ಕ್ಷ

            ಭಕ್ತಿ=ಕ್+ತ್+ಇ=ಕ್ತಿ


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು