https://youtu.be/-9C8tpESqWA?si=miPCNR30PcWTs3Qw
Please Like, Share, Comment and Subscribe my YouTube channel.
ವಿಷಯ ವಿವರಣೆ :ಯೋಗವು 8 ಅಂಗಗಳನ್ನು ಹೊಂದಿದೆ. ಇದನ್ನು ಅಷ್ಟಾಂಗಯೋಗ ಎನ್ನುವರು. ಯಮ ,ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ ,ಧಾರಣ, ಧ್ಯಾನ, ಸಮಾಧಿ ಇವುಗಳೇ ಎಂಟು ಅಂಗಗಳು. ಯೋಗಗಳಲ್ಲಿ ಜ್ಞಾನಯೋಗ ,ಭಕ್ತಿಯೋಗ, ಕರ್ಮಯೋಗ, ಹಾಗು ರಾಜಯೋಗಗಳೆಂಬ ನಾಲ್ಕು ವಿಧಗಳಿವೆ. ಸ್ವಾಮಿ ವಿವೇಕಾನಂದರು ಹೇಳುವಂತೆ "ಮಾನವನು ತನ್ನ ಸಂಪೂರ್ಣ ವಿಕಾಸವನ್ನು ಒಂದು ಜನ್ಮದಲ್ಲಿ ಅಥವಾ ಕೆಲವು ತಿಂಗಳು ಅಥವಾ ಕೆಲವು ಗಂಟೆಗಳಲ್ಲಿ ಸಾಧಿಸಬಹುದಾದ ಸಾಧನವೇ ಯೋಗ" ವಿಶ್ವಾದ್ಯಂತ 2015ನೇ ಜೂನ್ 21ರಂದು ಮೊದಲ ಬಾರಿಗೆ 177 ರಾಷ್ಟ್ರಗಳಲ್ಲಿ 'ವಿಶ್ವ ಯೋಗ ದಿನ' ಆಚರಿಸಲಾಯಿತು. ಪ್ರತಿವರ್ಷವೂ ಜೂನ್ 21 'ಯೋಗ ದಿನ'ವನ್ನಾಗಿ ಆಚರಿಸುತ್ತೇವೆ. ಧ್ಯಾನ ,ಯೋಗಾಸನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೈಹಿಕ ವ್ಯಾಯಾಮಗಳು ಈ ದಿನದ ಪ್ರಮುಖ ಕಾರ್ಯಕ್ರಮಗಳಾಗಿವೆ.
ದೇಹವನ್ನು ಶಿಸ್ತುಬದ್ಧವಾಗಿ, ಕ್ರಮವತ್ತಾಗಿ, ನಿಧಾನವಾಗಿ ಉಸಿರಿನ ಗತಿಯೊಂದಿಗೆ ಬೇಕಾದ ರೀತಿಯಲ್ಲಿ ಬಾಗಿಸುವುದು ,ತಿರುಗಿಸುವುದು, ಚಲಿಸುವಿಕೆ ಮಾಡುವುದರಿಂದ ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಯೋಗದಿಂದ ಶರೀರದಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ. ಜೀರ್ಣಾಂಗವ್ಯೂಹ, ಶ್ವಾಸಕೋಶ, ಹೃದಯ, ನರಮಂಡಲ, ಮಿದುಳು ಮುಂತಾದ ಎಲ್ಲ ಅಂಗಗಳ ಚಟುವಟಿಕೆಗಳು ಚುರುಕುಗೊಳ್ಳುತ್ತದೆ. ದೇಹದ ಪ್ರತಿಯೊಂದು ಭಾಗಕ್ಕೆ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ದೇಹದ ಹಲವು ಕಾಯಿಲೆಗಳು ಯೋಗದಿಂದ ಗುಣವಾಗುತ್ತದೆ. ಮನಸ್ಸು ಪ್ರಶಾಂತವಾಗುತ್ತದೆ. ಮಾನಸಿಕ ಕಾಯಿಲೆಗಳು ಕೂಡ ಯೋಗದಿಂದ ಕಡಿಮೆಯಾಗುತ್ತದೆ. ಯೋಗಾಭ್ಯಾಸಿಯು ಉಸಿರಿನ ಮೇಲೆ ನಿಯಂತ್ರಣವನ್ನು ಸಾಧಿಸಲೇಬೇಕು. ಉಸಿರಿಗೂ ಮನಸ್ಸಿಗೂ ನಿಕಟ ಸಂಬಂಧವಿದೆ. ಆದ್ದರಿಂದ ಮನಸ್ಸು ಹತೋಟಿಗೆ ಬರಬೇಕಾದರೆ ಉಸಿರಿನ ನಿಯಂತ್ರಣ ಅಗತ್ಯ. ಇದರಿಂದ ನಮ್ಮ ಮನಸ್ಸಿನಲ್ಲಿರುವ ಋಣಾತ್ಮಕ ಭಾವನೆಗಳು ಅಳಿದು ಧನಾತ್ಮಕ ಭಾವನೆಗಳು ಬೆಳೆಯುತ್ತದೆ. ಮಾನಸಿಕ ಸ್ಥಿರತೆ ಹಾಗೂ ಏಕಾಗ್ರತೆಯು ಹೆಚ್ಚಾಗುತ್ತದೆ.
ಉಪಸಂಹಾರ: ಒಟ್ಟಿನಲ್ಲಿ ಯೋಗವು ಮನುಷ್ಯನನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸುತ್ತದೆ. ಪ್ರತಿನಿತ್ಯ ಕ್ರಮಬದ್ಧವಾಗಿ ಯೋಗಾಸನಗಳನ್ನು ಮಾಡುವುದರಿಂದ ನಾವು ಆರೋಗ್ಯವಂತರಾಗಿ ನೆಮ್ಮದಿಯಿಂದ ಉತ್ತಮ ಜೀವನವನ್ನು ನಡೆಸಬಹುದು.
-ಉಷಾ ಪ್ರಸಾದ್
ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.
🙏ಧನ್ಯವಾದಗಳು 🙏
👌 very meaningful essay
ಪ್ರತ್ಯುತ್ತರಅಳಿಸಿ