https://youtu.be/N2GCjr7oPV0?si=r-WdC6q5F6KxVSbB
If you like the content,
Please Like, Share, Comment and Subscribe my YouTube channel.
Please Like, Share, Comment and Subscribe my YouTube channel.
ಪೀಠಿಕೆ: ಭಾರತ ದೇಶವು ಸಂಸ್ಕೃತಿಗಳ ತವರು ಹಾಗೂ ಹಬ್ಬಗಳ ನಾಡು. ಇಲ್ಲಿ ನಾವು ಆಚರಿಸುವಂತಹ ಪ್ರತಿಯೊಂದು ಆಚರಣೆಗಳಿಗೂ ಅದರದೇ ಆದಂತಹ ವಿಶೇಷತೆ ಇರುತ್ತದೆ. ಸಂಬಂಧಗಳಿಗೆ ಮಹತ್ವ ಕೊಡುವ ನಮ್ಮ ಈ ನಾಡಲ್ಲಿ ಸೋದರ-ಸೋದರಿಯರ ಸಂಬಂಧವನ್ನು ಹಾಗೂ ಬಾಂಧವ್ಯವನ್ನು ಬಲಪಡಿಸಲು ಶ್ರಾವಣ ಹುಣ್ಣಿಮೆಯಂದು ನಾವು ಆಚರಿಸುವ ಹಬ್ಬವೇ ರಕ್ಷಾಬಂಧನ.
ವಿಷಯ ವಿವರಣೆ:ರಕ್ಷಾಬಂಧನದಂದು ಸೋದರಿಯು ತನ್ನ ಸೋದರನ ಹಣೆಗೆ ತಿಲಕವನ್ನಿಟ್ಟು, ಬಲಗೈಗೆ ರಾಖಿ ಕಟ್ಟಿ, ಆರತಿಯನ್ನು ಬೆಳಗಿ, ಸಿಹಿಯನ್ನು ತಿನ್ನಿಸಿ, ಅಣ್ಣನಿಂದ ಉಡುಗೊರೆ ಹಾಗು ಆಶೀರ್ವಾದವನ್ನು ಪಡೆದು ಸಂತಸದಿಂದ ಸಂಭ್ರಮಿಸುತ್ತಾರೆ. ತನ್ನ ಸೋದರನ ಬಾಳಲ್ಲಿ ಸದಾ ಯಶಸ್ಸು, ಶ್ರೇಯಸ್ಸು, ಅಭಿವೃದ್ಧಿ, ನೆಮ್ಮದಿ ತುಂಬಿರಲಿ ಎಂದು ಬೇಡುತ್ತಾ, ಅವನ ದೀರ್ಘಾಯುಷ್ಯಕ್ಕಾಗಿ ಸಹೋದರಿಯು ಪ್ರಾರ್ಥಿಸುತ್ತಾಳೆ. ಅದೇ ರೀತಿ ಸಹೋದರನು ತನ್ನ ಸಹೋದರಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿಯೂ ಜೇವನ ಪರ್ಯಂತ ರಕ್ಷಿಸುವುದಾಗಿಯೂ ಭರವಸೆ ಕೊಡುತ್ತಾನೆ. ರಕ್ಷಾ ಬಂಧನವೂ ತಂಗಿಗೆ ಅಣ್ಣನ ಮೇಲೆ ಇರುವ ಅಕ್ಕರೆಯನ್ನು, ಅಣ್ಣನಿಗೆ ಸಹೋದರಿಯ ಮೇಲೆ ಇರುವ ಕಾಳಜಿಯನ್ನು ಹೊರಹಾಕುವ ಹಬ್ಬವಾಗಿದೆ. ಈ ದಿನವನ್ನು ನೂಲಹುಣ್ಣಿಮೆಯಾಗಿ ಆಚರಿಸಲಾಗುತ್ತದೆ.
ಹಿಂದೆ ಉತ್ತರ ಭಾರತದಲ್ಲಿ ಹೆಚ್ಚಾಗಿ ಪ್ರಚಲಿತವಾಗಿದ್ದ ಈ ಹಬ್ಬ ಇಂದು ದಕ್ಷಿಣ ಭಾರತದಲ್ಲೂ ಆಚರಿಸುತ್ತೇವೆ. ದೇಶದ ಎಲ್ಲಾ ಕಡೆಗಳಲ್ಲೂ ಜಾತಿಭೇದವಿಲ್ಲದೆ ಎಲ್ಲ ಜನಾಂಗದ ಜನರು ಕೂಡ ಸಂಭ್ರಮದಿಂದ ಆಚರಿಸುವ ಹಬ್ಬ ರಕ್ಷಾಬಂಧನ . ಪುರಾಣಗಳಲ್ಲೂ ಈ ಹಬ್ಬದ ಬಗ್ಗೆ ಉಲ್ಲೇಖವಿದೆ.
ಉಪಸಂಹಾರ:ವರ್ತಮಾನದ ಪರಿಸ್ಥಿತಿಯಲ್ಲಿ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ನೋಡಿದಾಗ ರಕ್ಷಾ ಬಂಧನ ಹಬ್ಬವನ್ನು ವಿಶೇಷವಾಗಿ ಆಚರಿಸುವುದು ಮಹತ್ವಪೂರ್ಣವಾಗಿದೆ. ಸ್ತ್ರೀ ರಕ್ಷಣೆಯ ದೃಷ್ಟಿಯಿಂದ ಈ ಹಬ್ಬವು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪರಸ್ಪರ ಬಾಂಧವ್ಯವನ್ನು ಸಾರುವ ಈ ಹಬ್ಬವು ಪ್ರತಿಯೊಬ್ಬರ ಬಾಲ್ಯದ ನೆನಪುಗಳಿಗೆ ಸಾಕ್ಷಿಯಾಗಿದೆ.
-ಉಷಾ ಪ್ರಸಾದ್
ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.
🙏ಧನ್ಯವಾದಗಳು 🙏