ರಾಷ್ಟ್ರೀಯ ಹಬ್ಬಗಳು


 ಪೀಠಿಕೆ: ಭಾರತವು ಹಬ್ಬಗಳ ನಾಡು. ನಮ್ಮದು ಜಾತ್ಯತೀತ ರಾಷ್ಟ್ರ. ಹಲವು ಜಾತಿಗಳು ಹಾಗೂ ಧರ್ಮಗಳು ನಮ್ಮ ದೇಶದಲ್ಲಿದೆ.ಪ್ರತಿಯೊಂದು ಧರ್ಮದವರೂ ತಮ್ಮದೇ ಆದ ಹಬ್ಬಗಳನ್ನು ಆಚರಿಸುತ್ತಾರೆ. ಹಬ್ಬಗಳು ಪ್ರದೇಶದಿಂದ ಪ್ರದೇಶಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಭಿನ್ನ ಭಿನ್ನವಾಗಿರುತ್ತದೆ. ಆದರೆ ರಾಷ್ಟ್ರೀಯ ಹಬ್ಬ ಎಂದರೆ ದೇಶದ ಜನರೆಲ್ಲ ಒಂದಾಗಿ ಸೇರಿ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ಇದು ಯಾವುದೇ ಧರ್ಮಕ್ಕೆ ಅಥವಾ ಜಾತಿಗೆ ಸೇರಿದ ಹಬ್ಬವಲ್ಲ.

ವಿಷಯ ವಿವರಣೆ: ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರಿಂದ ನಮಗೆ ದೇಶದ ಮೇಲಿನ ಗೌರವ ,ಪ್ರೀತಿ, ದೇಶಾಭಿಮಾನ ಜಾಸ್ತಿಯಾಗುತ್ತದೆ.ಹಬ್ಬಗಳ ಆಚರಣೆ ಮಾಡುವುದರಿಂದ 'ನಾವೆಲ್ಲರೂ ಒಂದೇ, ನಾವು ಭಾರತೀಯರು'  ಭಾವನೆ ನಮ್ಮಲ್ಲಿ ಮೂಡುತ್ತದೆ. ಹಬ್ಬಗಳು ಐಕ್ಯತೆ, ಸಹೋದರತೆ ಹಾಗೂ ಸಮಾನತೆಯ ಸಂದೇಶವನ್ನು ಸಾರುತ್ತದೆ. ಸದಾಕಾಲ ತನ್ನ ಸ್ವಾರ್ಥ ಚಿಂತನೆಯಲ್ಲೇ ತೊಡಗುವ ಮನುಷ್ಯನಿಗೆ ದೇಶದ ಬಗ್ಗೆ ಯೋಚಿಸಲು, ಗೌರವ ಸಲ್ಲಿಸಲು, ಹುತಾತ್ಮರನ್ನು ನೆನಪಿಸಲು ರಾಷ್ಟ್ರೀಯ ಹಬ್ಬಗಳು ಸಹಕಾರಿಯಾಗಿವೆ. ಸ್ವಾತಂತ್ರ್ಯ ದಿನಾಚರಣೆ. ಗಣರಾಜ್ಯ ದಿನಾಚರಣೆ. ಮಕ್ಕಳ ದಿನಾಚರಣೆ. ಶಿಕ್ಷಕರ ದಿನಾಚರಣೆ. ಗಾಂಧಿ ಜಯಂತಿ ಮುಂತಾದ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ.

 ಬ್ರಿಟಿಷರ ಕಪಿ ಮುಷ್ಟಿಯಿಂದ ಬಿಡುಗಡೆ ಹೊಂದಿ ಸ್ವಾತಂತ್ರ್ಯವನ್ನು ಪಡೆದ ಸವಿನೆನಪಿಗಾಗಿ ಆಗಸ್ಟ್ 15 ಸ್ವಾತಂತ್ರ್ಯ ದಿನ ವಾಗಿ ಪ್ರತಿವರ್ಷ ಆಚರಿಸುತ್ತೇವೆ. ಅಂದು ಸ್ವಾತಂತ್ರ್ಯಯೋಧರ ನೆನಪನ್ನು ಮಾಡುತ್ತಾ ಅವರಿಗೆ ಗೌರವವನ್ನು ಸಲ್ಲಿಸುತ್ತೇವೆ. ಸ್ವಾತಂತ್ರ್ಯ ಸಿಕ್ಕಿದ ಖುಷಿಗೆ ಸಿಹಿ ಹಂಚುತ್ತೇವೆ. ದೇಶಕ್ಕೆ ಗೌರವ ನಮನ ಸಲ್ಲಿಸಲು ರಾಷ್ಟ್ರಧ್ವಜವನ್ನು ಹಾರಿಸಿ, ರಾಷ್ಟ್ರಗೀತೆಯನ್ನು ಹಾಡುತ್ತೇವೆ. ಪ್ರತಿವರ್ಷ ಜನವರಿ 26ರಂದು ಗಣರಾಜ್ಯ ದಿನವನ್ನು ಆಚರಿಸುತ್ತೇವೆ. ದೇಶದ ಸಂವಿಧಾನವೂ ಈ ದಿನದಂದು ಜಾರಿಗೆ ಬಂತು. ನವೆಂಬರ್ 14 ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಪ್ರಾಣ. ಅವರು ಹುಟ್ಟಿದ ದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಸಪ್ಟೆಂಬರ್ 5ರಂದು ಶಿಕ್ಷಕರ ದಿನವಾಗಿ ಎಲ್ಲೆಡೆ ಆಚರಿಸಲ್ಪಡುತ್ತದೆ.  ಗಾಂಧೀಜಿಯವರು ಹುಟ್ಟಿದ ದಿನವಾದ ಅಕ್ಟೋಬರ್ ಎರಡನ್ನು ಗಾಂಧಿ ಜಯಂತಿ ಎಂದು ದೇಶದೆಲ್ಲೆಡೆ ಆಚರಿಸಲಾಗುತ್ತದೆ.

ಉಪಸಂಹಾರ: ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಮೂಲಕ ನಾವೆಲ್ಲ ಒಂದೇ ಎಂಬ ಭಾವನೆಯು ಬೆಳೆಯುತ್ತದೆ. ರಾಷ್ಟ್ರಭಕ್ತಿ ಹೆಚ್ಚಾಗುತ್ತದೆ.ಜನರ ನಡುವಿನ  ದ್ವೇಷ ವೈಷಮ್ಯಗಳು ಕಡಿಮೆಯಾಗುತ್ತದೆ

-ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.

   

    🙏ಧನ್ಯವಾದಗಳು 🙏


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು