ಕ್ರೀಡೆಗಳ ಮಹತ್ವ

 


ಪೀಠಿಕೆ: ಕ್ರೀಡೆಗಳು ನಮ್ಮ ಮನಸ್ಸಿಗೆ ಸಂತೋಷವನ್ನು ಉಲ್ಲಾಸವನ್ನು ಕೊಡುವುದು. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ .ನಮ್ಮ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಗೂ ಕ್ರೀಡೆಗಳು ಬಹಳ ಮುಖ್ಯವಾಗಿದೆ .

ವಿಷಯ ವಿವರಣೆ :ಕ್ರೀಡೆಗಳು ನಮ್ಮ ಶರೀರವನ್ನು ಕ್ರಿಯಾಶೀಲವಾಗಿ, ತಾರುಣ್ಯಯುತವಾಗಿ ಮತ್ತು ಶಕ್ತಿಯುತ ವಾಗಿರುವಂತೆ ಮಾಡುತ್ತದೆ. ಇದರಿಂದ  ರಕ್ತಪರಿಚಲನೆ ಜಾಸ್ತಿಯಾಗಿ ಶರೀರಕ್ಕೆ ಅಗತ್ಯವಾದಷ್ಟು ಆಮ್ಲಜನಕ ದೊರೆಯುತ್ತದೆ. ವ್ಯಕ್ತಿಯ ಆರೋಗ್ಯವಂತರಾಗಿ ಬದುಕಲೂ ಕ್ರೀಡೆಯು ಅಗತ್ಯವಾಗಿದೆ .ಕ್ರೀಡೆಗಳು ಸಹಕಾರವನ್ನು ಕಲಿಸುತ್ತದೆ ,ನಾಯಕತ್ವವನ್ನು ಬೆಳೆಸುತ್ತದೆ. ತಂಡ ಸ್ಪೂರ್ತಿ ವೃದ್ಧಿಸುವಂತೆ ಮಾಡುತ್ತದೆ. ನ್ಯಾಯಯುತ ತೀರ್ಮಾನ ಹಾಗೂ ಕ್ರೀಡಾ ಸ್ಪೂರ್ತಿ ಉಂಟುಮಾಡುತ್ತದೆ. ಆಟಗಳು ಸಹಕಾರ, ನಾಯಕತ್ವ ಗುಣವನ್ನು ವೃದ್ಧಿಸುತ್ತದೆ. ಆಟಗಾರರನ್ನು ಧೈರ್ಯವಂತರಾಗಿ, ಸಾಹಸಿಗಳಾಗಿ ಜವಾಬ್ದಾರಿ ವ್ಯಕ್ತಿಯನ್ನಾಗಿ ಮಾಡುತ್ತದೆ. ರಾಷ್ಟ್ರೀಯ ಮನೋಧರ್ಮವನ್ನು ಹೆಚ್ಚಿಸುತ್ತದೆ .ಆಟಗಳು ಅಹಂಕಾರವನ್ನು ಹತ್ತಿಕ್ಕುತ್ತದೆ. ನಡತೆಯನ್ನು ಉತ್ತಮಪಡಿಸುತ್ತದೆ. ಕ್ರೀಡಾಳುಗಳಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸುತ್ತದೆ. ಜೀವನವನ್ನು ಎದುರಿಸಲು ಸಾಧ್ಯವಾಗುತ್ತದೆ .. ಕ್ರೀಡೆಗಳಲ್ಲಿ ಒಳಾಂಗಣ ಹಾಗೂ ಹೊರಾಂಗಣ ಎಂಬ ಎರಡು ಬಗೆಗಳಿವೆ.  ಫುಟ್ಬಾಲ್, ವಾಲಿಬಾಲ್, ಕಬಡ್ಡಿ , ಖೋಖೋ, ಕ್ರಿಕೆಟ್, ಹಾಕಿ ,ತ್ರೋಬಾಲ್ ಇತ್ಯಾದಿ  ಹೊರಂಗಣ ಕ್ರೀಡೆಗಳಾಗಿವೆ.  ಕೇರಂ, ಚೆಸ್,   ಟೇಬಲ್ ಟೆನ್ನಿಸ್ ಮುಂತಾದ ಒಳಾಂಗಣ  ಕ್ರೀಡೆಗಳು ಮಹತ್ವದ್ದಾಗಿದೆ.  ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಒಳ್ಳೆಯ ಆಟಗಾರರು ನುರಿತ ತರಬೇತುದಾರರು ನಮ್ಮ ದೇಶದಲ್ಲಿದ್ದಾರೆ. ಒಟ್ಟಿನಲ್ಲಿ ಜೀವನದಲ್ಲಿ ಹಣ, ಹೆಸರು,   ಆರೋಗ್ಯ, ಕೀರ್ತಿ, ಸ್ಥಾನಮಾನ ಹೀಗೆ  ಎಲ್ಲವನ್ನು ಕ್ರೀಡೆಗಳು ಒದಗಿಸುತ್ತದೆ.

ಉಪಸಂಹಾರ: ಮಕ್ಕಳಿಗೆ ಪಾಠದ ಜೊತೆ ಆಟವು ಕೂಡ ಅಗತ್ಯ ಎಂಬುದನ್ನು ಪೋಷಕರು ಮನಗಾಣಬೇಕು. ಮಗುವಿನ ಸರ್ವತೋಮುಖವಾದ ಬೆಳವಣಿಗೆಗೆ ಕ್ರೀಡೆಗಳು ತುಂಬಾ ಮಹತ್ವಪೂರ್ಣವಾದುದು ಎಂಬುದನ್ನು ಪ್ರತಿಯೊಬ್ಬರೂ ಅರಿತಿರಬೇಕು. ಕ್ರೀಡಾಸಕ್ತಿಯನ್ನು ಎಲ್ಲರೂ ಅಳವಡಿಸಿಕೊಂಡರೆ ಆರೋಗ್ಯಪೂರ್ಣವಾದ ಬದುಕು ನಮ್ಮದಾಗಬಹುದು.

-ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.

     

  🙏ಧನ್ಯವಾದಗಳು 🙏

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು