ಆತ್ಮ ನಿಭ೯ರ ಭಾರತ .

If you like the content,
Please Like, Share, Comment and Subscribe my YouTube channel.


ಪೀಠಿಕೆ
:
ಆತ್ಮ ನಿಭ೯ರ ಭಾರತ ಎಂದರೆ ಅದು ಸ್ವಾವಲಂಬಿ ಭಾರತ ಎಂದರ್ಥ. ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ಸ್ವಾವಲಂಬನೆಯನ್ನು ಸಾಧಿಸುವುದು ಇದರ ಉದ್ದೇಶ. ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾ ಬಂದ ಸಂಕಷ್ಟದ ಸಮಯದಲ್ಲಿ 'ಆತ್ಮ ನಿಭ೯ರ ಭಾರತ ' ಎಂಬ ಯೋಜನೆಯನ್ನು ಹುಟ್ಟು ಹಾಕಿದರು.
ವಿಷಯ ವಿವರಣೆ : ಜನರಲ್ಲಿ ಆತ್ಮವಿಶ್ವಾಸ ಮೂಡಿಸಿ ಸ್ವಾಭಿಮಾನವನ್ನು ಊರ್ಜಿತಗೊಳಿಸಿ ಜನರನ್ನು ಸ್ವಾಭೀಮಾನಿಗಳನ್ನಾಗಿ ಮಾಡುವುದು ಆತ್ಮ ನಿಭ೯ರ ಭಾರತದ ಬಹುದೊಡ್ಡ ಉದ್ದೇಶವಾಗಿದೆ. ಭಾರತವು ಸ್ವಾವಲಂಬಿ ದೇಶವಾದಾಗ ಮಾತ್ರ ಆತ್ಮನಿಭ೯ರ ಭಾರತದ ಕನಸು ಸಾಕಾರಗೊಳ್ಳುತ್ತದೆ. ದೇಶವು ಸ್ವಾವಲಂಬನೆಯತ್ತ ಸಾಗಬೇಕಾದರೆ ಜನರ ಪಾತ್ರ ಅತ್ಯಗತ್ಯ. ಸ್ವದೇಶಿ ಚಿಂತನೆಗಳು, ಸ್ವದೇಶಿ ವಸ್ತುಗಳ ಬಳಕೆ, ಸ್ವದೇಶಿ ಕೈಗಾರಿಕೆ, ಉದ್ಯಮ ಹಾಗೂ ಕೃಷಿ ಕ್ಷೇತ್ರಗಳ ಉತ್ತೇಜನದಿಂದ ಸ್ವಾವಲಂಬನೆಯತ್ತ  ಸಾಗಬಹುದು. ಮೋದಿ ಜೀ ಯವರು ಇದಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಕೃಷಿಕರಿಗೆ ಹೆಚ್ಚು ಮೂಲ ಸೌಕಯ೯ಕಲ್ಪಿಸಲು 'ಕೃಷಿ ಮೂಲಸೌಕಯ೯ ನಿಧಿ' ಸ್ಥಾಪಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಲು ಹೊಸ ಶಿಕ್ಷಣ ನೀತಿಯೊಂದನ್ನು ರೂಪಿಸಿದರು. ಕೈಗಾರಿಕೆಗಳ ಉತ್ತೇಜನಕ್ಕೆ ಅನೇಕ ಕೋಟಿ ರೂಪಾಯಿಗಳ ಸಾಲ ಸೌಲಭ್ಯಗಳನ್ನು ಘೋಷಿಸಿದರು. ಹೀಗೆ ಹತ್ತುಹಲವು ಯೋಜನೆಗಳ ಮೂಲಕ ಯೋಜನೆಗಳನ್ನು ಕಾಯ೯ಗತಗೊಳಿಸಲು ಶ್ರಮಿಸಲಾಗುತ್ತಿದೆ.
ಉಪಸಂಹಾರ: ನಿನ್ನ ಉದ್ಧಾರ ನಿನ್ನ ಕೈಯಲ್ಲಿದೆ' ನಿನ್ನ ಏಳಿಗೆಯ ಶಿಲ್ಪಿ ನೀನೇ ಎಂಬ ಪ್ರಾಚೀನ ಭಾರತೀಯ ಮೌಲ್ಯಗಳನ್ನು ಆತ್ಮನಿಭ೯ ರದಲ್ಲಿ ಕಾಣುತ್ತೇವೆ. ಪ್ರತಿಯೊಬ್ಬ ನಾಗರೀಕನೂ ಸ್ವದೇಶೀ ಚಿಂತನೆಗಳೊಂದಿಗೆ ಸ್ವಾವಲಂಬನೆಯತ್ತ ಸಾಗಿ ಆತ್ಮನಿಭ೯ರ ಭಾರತಕ್ಕಾಗಿ ಶ್ರಮಿಸಬೇಕಿದೆ.

-ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.


  🙏ಧನ್ಯವಾದಗಳು 🙏

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು