ಆರೋಗ್ಯವೇ ಭಾಗ್ಯ

 


ಗಾದೆಗಳು ವೇದಗಳಿಗೆ ಸಮಾನ.ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಜನಪದರ  ಜೀವನದ ಅನುಭವದ ನುಡಿಮುತ್ತುಗಳು . ಆರೋಗ್ಯವೇ ಭಾಗ್ಯ ಎಂಬುದು ಒಂದು ಬಹು ಮುಖ್ಯವಾದ ಗಾದೆ ಮಾತು.

ಆರೋಗ್ಯವು ನಮ್ಮ ಜೀವನದಲ್ಲಿ ಎಲ್ಲಕ್ಕಿಂತ ಮುಖ್ಯವಾದ ಆಸ್ತಿಯಾಗಿದೆ. ಆರೋಗ್ಯ ಇದ್ದವನಿಗೆ ಯಾವ ಕಾಯಿಲೆಯೂ ಇರದು. ಈ ಪ್ರಪಂಚದಲ್ಲಿ ಆರೋಗ್ಯವಂತನು ಎಲ್ಲರಿಗಿಂತ ಹೆಚ್ಚು ಸುಖಿಯಾದವನು. ಹಣ, ಸಂಪತ್ತು, ಐಶ್ವರ್ಯ ಎಷ್ಟೇ ಇದ್ದರೂ ಆರೋಗ್ಯ ಇರದೇ ಹೋದರೆ ಪ್ರಯೋಜನವಿಲ್ಲ. ಹಣ ಕೊಟ್ಟರೆ ಎಲ್ಲವೂ ದೊರೆಯುತ್ತದೆ. ಆದರೆ ಆರೋಗ್ಯ ಕೆಟ್ಟರೆ ನಾವು ಕೂಡಿಟ್ಟ ಹಣವೆಲ್ಲಾ ವ್ಯಯವಾಗಬಹುದು.  ನೆಮ್ಮದಿ ಕೆಡಬಹುದು. ಆಧುನಿಕ, ಪಾಶ್ಚಿಮಾತ್ಯ ಹಾಗು ಐಶಾರಾಮಿ ಜೀವನಶೈಲಿಯು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

 ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಸರಿಯಾದ ಆಹಾರ ಸೇವನೆ, ನಿದ್ದೆ , ಮನಸ್ಸಿಗೆ ಶಾಂತಿ ಇದ್ದರೆ ಆರೋಗ್ಯ ವೃದ್ಧಿಸಬಹುದು. ಯೋಗ, ಧ್ಯಾನ ಪ್ರಾಣಾಯಾಮಗಳಿಂದ ಆರೋಗ್ಯದ ಬಲವರ್ಧನೆ ಸಾಧ್ಯ. ಹೀಗೆ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಜಗತ್ತಿನಲ್ಲಿ ಎಲ್ಲಕ್ಕಿಂತ ಮಿಗಿಲಾದುದು ಮಾನವನ ಆರೋಗ್ಯ ಎಂಬುದು ಶತಸಿದ್ಧ. ಅದಕ್ಕೆ ಹಿರಿಯರು 'ಆರೋಗ್ಯವೇ  ಭಾಗ್ಯ ' ಎಂದು ಹೇಳಿದ್ದಾರೆ.

-ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.

    

  🙏ಧನ್ಯವಾದಗಳು 🙏

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

1 ಕಾಮೆಂಟ್‌ಗಳು

  1. ಆರೋಗ್ಯವು ಜೀವನದ ಅಮೂಲ್ಯವಾದ ನಿಧಿ. ನಿಮ್ಮ ಜೀವನವು ಸಾಫಲ್ಯತೆಯನ್ನು ಪಡೆಯಲು ಮುಖ್ಯವಾಗಿ ಆರೋಗ್ಯದಿಂದಿರಲು ಏಟು.

    ಪ್ರತ್ಯುತ್ತರಅಳಿಸಿ
ಕಾಮೆಂಟ್‌‌ ಪೋಸ್ಟ್‌ ಮಾಡಿ
ನವೀನ ಹಳೆಯದು