ಭಾರತದ ಸ್ವಾತಂತ್ರ್ಯ ದಿನಾಚರಣೆ



ಟಿಪ್ಪಣಿ :ನಾವು ಪ್ರತಿ ವರ್ಷವೂ ಸ್ವಾತಂತ್ರ್ಯ ದಿನವನ್ನು ರಾಷ್ಟ್ರೀಯ ಹಬ್ಬವಾಗಿ  ಆಚರಿಸುತ್ತೇವೆ. ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ಎಲ್ಲಾ ತ್ಯಾಗಗಳನ್ನು ಸ್ವಾತಂತ್ರ್ಯ ದಿನವು ನೆನಪಿಸುತ್ತದೆ.. ಕ್ರಿಶ.1947 ಆಗಸ್ಟ್ 15 ರಂದು ತ್ಯಾಗ, ಬಲಿದಾನಗಳ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು 
ವಿಷಯ ವಿವರಣೆ :ಸ್ವಾತಂತ್ರ್ಯ ಪೂರ್ವದಲ್ಲಿ  ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದರು .ಬ್ರಿಟಿಷರು ಅಲ್ಲದೆ ಪೋರ್ಚುಗೀಸರು ಡಚ್ಚರು ಫ್ರೆಂಚರು ನಮ್ಮ ದೇಶವನ್ನು ಆಳಿದ್ದಾರೆ . ಭಾರತದಲ್ಲಿದ್ದ ಅಪಾರ ಸಂಪತ್ತನ್ನು ಲೂಟಿ ಮಾಡಿದ್ದಾರೆ.ನಮ್ಮ ದೇಶ ಶ್ರೀಮಂತವಾದ ದೇಶ.  ವಿದೇಶಿಯರು ಯುರೋಪಿನ ಸಮುದ್ರಮಾರ್ಗದ ಮೂಲಕ ಭಾರತಕ್ಕೆ ಬಂದು ವ್ಯಾಪಾರ ಮಾಡಲು ಪ್ರಾರಂಭಿಸಿದರು.  ನಮ್ಮ ದೇಶದ ರಾಜರು ಅವರಿಗೆ ಅನುಮತಿಯನ್ನು ನೀಡಿದರು .ಆದರೆ ಅವರು  ದೇಶದ ಆಂತರಿಕ ವಿಷಯಗಳಲ್ಲಿ ಭಾಗವಹಿಸಲು ಶುರುಮಾಡಿದರು . ನಮ್ಮ ನಮ್ಮಲ್ಲಿ  ದ್ವೇಷ, ಹಗೆತನ ಹುಟ್ಟುವಂತೆ ಮಾಡಿ ಒಡೆದು ಆಳುವಂತೆ ಮಾಡಿ ತಮ್ಮ ಸಾಮ್ರಾಜ್ಯವನ್ನು ಕಟ್ಟಿದರು .ನಮ್ಮ ದೇಶದಲ್ಲಿರುವ ಸಂಪತ್ತನ್ನು ಅವರ ದೇಶಗಳಿಗೆ ಸಾಗಿಸಿದರು
ಭಾರತದ ಸ್ವಾತಂತ್ರ್ಯಕ್ಕೆ 1857 ರಿಂದ 1947 ರವರೆಗೆ ಹಲವು ದಶಕಗಳ ಕಾಲ ನಮ್ಮ ಪೂರ್ವಜ್ಜರು ಹೋರಾಡಿರುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಲೇಬೇಕು. ಅವರುಗಳಲ್ಲಿ ಮಹಾತ್ಮ ಗಾಂಧಿ, ಮಂಗಲಪಾಂಡೆ, ಭಗತ್‌ಸಿಂಗ್, ಸುಭಾಸ್ ಚಂದ್ರ ಬೋಸ್, ಚಂದ್ರ ಶೇಖರ್ ಆಜಾದ್, ರಾಣಿ  ಲಕ್ಷ್ಮೀಬಾಯಿ ಬಾಯಿ, ಬಾಲಗಂಗಾಧರ ತಿಲಕ್, ಸರ್ದಾರ್ ವಲ್ಲಭಭಾಯಿ ಪಟೇಲ್ ಕಿತ್ತೂರ ರಾಣಿ ಚೆನ್ನಮ್ಮ, ವೀರ ಸಾವರ್ಕರ್ ಮುಂತಾದವರ ತ್ಯಾಗವನ್ನು ನಾವು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.ಆಗಸ್ಟ್ 15 ಇಡೀ ಭಾರತಕ್ಕೆ ಉತ್ಸಾಹ ಮತ್ತು ಸಂತೋಷದ ದಿನವಾಗಿದೆ. ಈ ದಿನ ನಾವು ನಮ್ಮ ಸ್ವಾತಂತ್ರ್ಯ ದಿನವನ್ನು ಪರಿಗಣಿಸುತ್ತೇವೆ. ಈ ದಿನವು ಯಾವುದೇ ಜಾತಿ, ಧರ್ಮ, ಪ್ರಾಂತ್ಯ ಮತ್ತು ಸಂಸ್ಕೃತಿಗಿಂತ ದೊಡ್ಡದಾಗಿದೆ. ಧ್ವಜಾರೋಹಣ, ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಗಸ್ಟ್ 15 ಅನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಶಾಲೆಗಳು, ಕಾಲೇಜುಗಳು, ಕಚೇರಿಗಳು, ಸಮಾಜದ ಆವರಣಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಮೂಲಕ ಆಗಸ್ಟ್ 15 ರ ಶುಭ ಸಂದರ್ಭದಲ್ಲಿ ಆಚರಣೆಯನ್ನು ಆಯೋಜಿಸಲಾಗುತ್ತದೆ. ಈ ದಿನವನ್ನು ಭಾರತದ ಎಲ್ಲಾ ನಾಗರಿಕರು ಬಹಳ ಉತ್ಸಾಹದಿಂದ ಆಚರಿಸುತ್ತಾರೆ.ಈ ದಿನದಂದು ಭಾರತದ ಪ್ರಧಾನ ಮಂತ್ರಿಗಳು ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡುತ್ತಾರೆ ಮತ್ತು ಭಾಷಣದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ.

ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ಭಾರತವು ಹಲವು ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ, ಅಭಿವೃದ್ಧಿಗಳ ಸಂಖ್ಯೆ ಸ್ವಾತಂತ್ರ್ಯ ಭಾರತದಲ್ಲಿ ಹೆಚ್ಚುತ್ತಲೇ ಇರುತ್ತದೆ ಹೊರತು, ಎಂದಿಗೂ ಇದಕ್ಕೆ ಅಂತ್ಯ ಎನ್ನುವುದಿಲ್ಲ.  ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಸ್ವಾತಂತ್ರ್ಯ ಎಂದರೆ ಪ್ರತಿಯೊಬ್ಬ ವ್ಯಕ್ತಿಗೆ ಈ ಭಾರತದಲ್ಲಿ ಎಲ್ಲ ರೀತಿಯ ಮೂಲಭೂತ ಹಕ್ಕು ಇದೆ. ಎಲ್ಲ ರೀತಿಯ ಸ್ವಾತಂತ್ರ್ಯ ಇದೆ. ಆದರೆ ಒಬ್ಬ ವ್ಯಕ್ತಿಯು ತನ್ನ ಸ್ವಾತಂತ್ರ್ಯ ಹಕ್ಕಿನಿಂದ ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿ ಆಗುವ ಯಾವುದೇ ಕೆಲಸವನ್ನು ಮಾಡಬಾರದು ಎಂಬುದನ್ನು ಸದಾ ನಾವು ನೆನಪಿನಲ್ಲಿ ಇಟ್ಟುಕೊಂಡಿರಬೇಕು.

ಉಪಸಂಹಾರ:ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಮತ್ತು ಗುರಿಯನ್ನು ಪಡೆಯಲು ಮತ್ತು ಈ ಪ್ರಜಾಪ್ರಭುತ್ವ ರಾಷ್ಟ್ರವನ್ನು ಯಶಸ್ವಿಯಾಗಿ ಮುನ್ನಡೆಸಲು ಶ್ರಮವಹಿಸಬೇಕು . ಹಿರಿಯರು ಕಷ್ಟ ಪಟ್ಟು ತಂದ ಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗಬೇಕು ನಾವೆಲ್ಲರೂ ಒಂದೇ ನಾವು ಭಾರತೀಯರು ಎಂಬ ಭಾವನೆ ನಮ್ಮಲ್ಲಿ ಗಟ್ಟಿಯಾಗಿ ಇರಬೇಕು.

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು