ನನ್ನಮ್ಮ ಹೇಳಿದ ಮನೆಮದ್ದುಗಳು

 


ಜೇಷ್ಠಮಧು


ಜೇಷ್ಠಮಧು ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುವ ಮೂಲಿಕೆಯಾಗಿದೆ ಇದನ್ನು ಜೇಷ್ಠಮಧು ಅತಿಮಧುರ ಮಧುಕ ಎಂದು ಕರೆದರೆ ಸಂಸ್ಕೃತದಲ್ಲಿ ಇದನ್ನ ಯಷ್ಟಿಮಧು ಎಂದು ಕರೆಯುತ್ತಾರೆ .ಈ ಮೂಲಿಕೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕ್ಷಣಮಾತ್ರದಲ್ಲಿ ಪರಿಹಾರ ನೀಡುತ್ತದೆ ಒಣಕೆಮ್ಮು ಗಂಟಲು ನೋವಿನಂತಹ ಸಮಸ್ಯೆಗಳಿಗೆ ಜೇಷ್ಠಮಧು ಹೇಳಿಮಾಡಿಸಿದ ಔಷಧಿಯಾಗಿದೆ.ಜೇಷ್ಠಮಧುವಿನ ಚೂರನ್ನು ಬಾಯಿಯಲ್ಲಿ ಹಾಕಿಕೊಂಡು ಆಗಾಗ ಅದರ ರಸವನ್ನ ಹೀರಿಕೊಳ್ಳುತ್ತಾ ಇರಿ ಇದರಿಂದ ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ ಜೇಷ್ಠಮಧುವಿನ ಕಷಾಯವನ್ನು ಮಾಡಿ ಸೇವಿಸಿದರು ಕೆಮ್ಮು ಬಲುಬೇಗನೆ ಕಡಿಮೆಯಾಗುತ್ತದೆ .


ದೊಡ್ಡಪತ್ರೆ


ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆ ಮಹತ್ವದ ಸ್ಥಾನ ಇದೆ..ಇದನ್ನು ಸಾಂಬ್ರಾಣಿ, ಸಂಬಾರಬಳ್ಳಿ, ಅಜವಾನದೆಲೆ, ಕರ್ಪೂರವಳ್ಳಿ, ಚೆಂಪರವಳ್ಳಿ ಹೀಗೆ ಹಲವು ಹೆಸರುಗಳಿಂದ ಕರೆಯುತ್ತೇವೆ. ಎಲೆಗಳು ದಪ್ಪವಾಗಿದ್ದು, ನೀರಿನ ಅಂಶ ಹೆಚ್ಚಿರುತ್ತದೆ.

ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆಯ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಟ್ಟರೆ ಜ್ವರ ಇಳಿಯುತ್ತದೆ. ದೊಡ್ಡಪತ್ರೆ ಎಲೆಗಳ ರಸ ಮತ್ತು ಅಷ್ಟೇ ಪ್ರಮಾಣದ ಎಳ್ಳೆಣ್ಣೆಯನ್ನು ನಿತ್ಯ ತಲೆಗೆ ಹಚ್ಚಿಕೊಳ್ಳುವುದರಿಂದ ಕಣ್ಣುರಿ ಕಡಿಮೆಯಾಗುತ್ತದೆ.

ಪದೇಪದೆ ಮಕ್ಕಳಲ್ಲಿ ಕಾಡುವ ಕಫ ಕೆಮ್ಮು ಶೀತಕ್ಕೆ ನಾಲ್ಕೈದು ಸಾಂಬ್ರಾಣಿ ಎಲೆಗಳನ್ನು ಕೆಂಡದಲ್ಲಿ ಬಾಡಿಸಿ ರಸ ಹಿಂಡಿ ಜೇನು ಬೆರೆಸಿ ಕುಡಿಸಿದರೆ ಕೆಮ್ಮು, ಕಫ ಕಡಿಮೆಯಾಗುತ್ತದೆ. ಶೀತದಿಂದಾಗಿ ಮಕ್ಕಳಿಗೆ ಮಲಬದ್ಧತೆಯಾದರೆ ಎಲೆಗಳ ರಸದಲ್ಲಿ ಜೇನುತುಪ್ಪ ಬೆರೆಸಿ ಕುಡಿಸಬೇಕು.

ಒಂದು ವಾರದವರೆಗೆ ದೊಡ್ಡಪತ್ರೆ ಎಲೆಯ ರಸವನ್ನು ಸೇವಿಸುವುದರಿಂದ ಹಳದಿ ರೋಗ ನಿವಾರಣೆಯಗುತ್ತದೆ. ಚೇಳು ಕಡಿದ ಜಾಗಕ್ಕೆ ದೊಡ್ಡಪತ್ರೆ ರಸವನ್ನು ಹಚ್ಚಿದರೆ ನೋವು ನಿವಾರಣೆಯಾಗುತ್ತದೆ. ಉಪ್ಪು ಸೇರಿಸಿ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.

ತುರಿಕೆ, ಕಜ್ಜಿ ಅಥವಾ ಬೆವರುಸಾಲೆ ಬಿದ್ದಾಗ ಆ ಜಾಗಕ್ಕೆ ಹಸಿಯಾಗಿ ಸಾಂಬ್ರಾಣಿ ಎಲೆಗಳನ್ನು ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ.


ಅಮೃತ ಬಳ್ಳಿ


ಅಮೃತ ಬಳ್ಳಿಯನ್ನು ಎರಡರಿಂದ ಮೂರು ತಿಂಗಳ ಕಾಲ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಎರಡು ಚಮಚ ಕಾಂಡದ ರಸವನ್ನು ಜೇನುತುಪ್ಪದೊಡನೆ ಆಹಾರ ಸೇವನೆಗೂ ಮೊದಲು ಸೇವಿಸುವುದರಿಂದ, ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ನಾಲ್ಕು ಚಮಚ ರಸಕ್ಕೆ, ಅಷ್ಟೇ ಪ್ರಮಾಣದಲ್ಲಿ ಜೇನುತಪ್ಪ ಸೇರಿಸಿ, ದಿನದಲ್ಲಿ ಮೂರು ಬಾರಿ ಸೇವಿಸುವುದರಿಂದ ಶೀತ, ಜ್ವರ, ಕೆಮ್ಮು, ನೆಗಡಿ ಎರಡು ಮೂರು ದಿನಗಳಲ್ಲೇ ಕಡಿಮೆಯಾಗುತ್ತದೆ. ನೀವು ಮಕ್ಕಳಿಗೆ ಕೊಡೋದಾದ್ರೇ.. ಇದರಲ್ಲಿ ಅರ್ಧದಿಂದ ಕಾಲು ಬಾಗ ಪ್ರಮಾಣದಲ್ಲಿ ಕೊಟ್ಟರೆ ಸಾಕು.ಮಧುಮೇಹ ರೋಗಿಗಳು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಒಂದು ಗೇಣು ಉದ್ದದ ಅಮೃತ ಬಳ್ಳಿಯ ಕಾಂಡವನ್ನು ಚೆನ್ನಾಗಿ ಜಗಿದು, ರಸವನ್ನು ಮಾತ್ರ ಸೇವಿಸಿದ್ರೇ, ಸಕ್ಕರೆ ಅಂಶ ಇಳಿಕೆ ಆಗಲಿದೆ. ಜೊತೆಗೆ ಕೈಕಾಲು ಉರಿ, ಸುಸ್ತು, ದೌರ್ಬಲ್ಯ ಕಡಿಮೆಯಾಗಲಿದೆ. ಚರ್ಮರೋಗ ಕಣ್ಮರೆಯಾಗುತ್ತದೆ.ಮೂಲವ್ಯಾಧಿಯಿಂದ ಬಳಲುತ್ತಿರೋರು ಮೂರು ಚಮಚ ರಸಕ್ಕೆ ಒಂದು ಲೋಟ ಮಜ್ಜಿಗೆ ಸೇರಿಸಿ ದಿನದಲ್ಲಿ ಎರಡು ಮೂರು ಬಾರಿ ಕುಡಿಯೋದ್ರಿಂದ, ರಕ್ತಸ್ತ್ರಾವ ಆಗ್ತಾ ಇದ್ರೇ ನಿಲ್ಲಲಿದೆ. ಅಲ್ಲದೇ ಮಲಬದ್ಧತೆ ಕೂಡ ನಿವಾರಣೆಯಾಗಲಿದೆ.ಇನ್ನೂ ಕಾಮಾಲೆ ರೋಗದಿಂದ ನೀವು ಬಳಲುತ್ತಿದ್ದರೇ, ಅಮೃತ ಬಳ್ಳಿಯ ನಾಲ್ಕು ಚಮಚ ರಸಕ್ಕೆ, ಒಂದು ಚಮಚ ಜೇನುತುಪ್ಪ ಸೇರಿಸಿ, ಬೆಳಿಗ್ಗೆ ಆಹಾರಕ್ಕೆ ಮೊದಲು ಸೇವಿಸಿದ್ರೇ, ರೋಗ ಕಡಿಮೆಯಾಗಲಿದೆ. ಹೀಗೆ ಐದರಿಂದ ಏಳುದಿನಗಳು ತೆಗೆದುಕೊಳ್ಳಬೇಕು. ಅನಾರೋಗ್ಯ ತೀವ್ರ ಸ್ವರೂಪವಾಗಿದ್ದರೆ ಕೂಡಲೇ ವೈದ್ಯರನ್ನು  ಸಂಪರ್ಕಿಸಿ.


ಅಶೋಕ ವೃಕ್ಷ 


ಈ ಮರದ ತೊಗಟೆಯ ಗಂಜಿ ಹದಿಹರೆಯದ ಹೆಣ್ಣು ಮಕ್ಕಳ ಮುಟ್ಟಿನ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಮುಟ್ಟಾಗಿ 3 ನೇ ದಿನದಿಂದ ಪ್ರಾರಂಭಿಸಿ 12 ದಿನಗಳ ಕಾಲ ಈ ಗಂಜಿಯನ್ನು ಹಾಗೇಯೇ ತಿನ್ನತಕ್ಕದ್ದು. ಅಶೋಕ ವೃಕ್ಷದ 3 ಇಂಚು ಅಗಲದ 2  ತುಂಡುಗಳನ್ನು ಬಟ್ಟೆಯಲ್ಲಿ ಕಟ್ಟಿ 5 ಲೀಟರ್ ನೀರಲ್ಲಿ ಅದ್ದಿಟ್ಟು , ಕುದಿಸಿ ಬತ್ತಿಸಿ ಅದನ್ನು 2.5 ಲೀ ಮಾಡಿ ನಂತರ ಕಟ್ಟಿಟ್ಟ ಬಟ್ಟೆಯನ್ನು ತೆಗೆದು ಆ ಕಷಾಯಕ್ಕೆ ಒಂದು ಮುಷ್ಟಿ ಅಕ್ಕಿಯನ್ನು ಹಾಕಿ ಬೇಯಿಸಿ ಉಣ್ಣಬೇಕು. ಇದು ಮುಟ್ಟಿನ ತೊಂದರೆಗಳಿಗೆ ರಾಮಬಾಣ.ಇದೇ ರೀತಿ 3 ತಿಂಗಳ ಕಾಲ ಮುಟ್ಟಾಗಿ 3ನೇ ದಿನದಿಂದ 12 ದಿನಗಳ ಕಾಲ ಪುನರಾವರ್ತಿಸಬೇಕು. 


ನೆಲನೆಲ್ಲಿ 

ಭೇದಿ ಉಂಟಾದಲ್ಲಿ ನೆಲನೆಲ್ಲಿಯ ಎಳೆಯ ಕಾಂಡವನ್ನು, ಜಜ್ಜಿ, ರಸ ತೆಗೆದು, ದಿನಕ್ಕೆ ೩ ಬಾರಿ ಸೇವಿಸುವುದರಿಂದ, ಭೇದಿ ನಿಯಂತ್ರಣಕ್ಕೆ ಬರುತ್ತದೆ.

ನೆಲನೆಲ್ಲಿಯ ಗಿಡವನ್ನು ಬೇರು ಸಮೇತವಾಗಿ, ಜಜ್ಜಿ, ಗಾಯಕ್ಕೆ ಲೇಪಿಸುವುದರಿಂದ, ಗಾಯವು ಬೇಗ ವಾಸಿಯಾಗುತ್ತದೆ.ಚರ್ಮ ರೋಗಗಳಿಗೆ, ನೆಲನೆಲ್ಲಿಯ ಎಲೆಯನ್ನು ಉಪ್ಪಿನೊಂದಿಗೆ ಅರೆದು, ಚರ್ಮಕ್ಕೆ ಲೇಪಿಸುವುದರಿಂದ ಚರ್ಮ ರೋಗ ಕಡಿಮೆಯಾಗುತ್ತದೆ. ನೆಲನೆಲ್ಲಿಯ ಕಷಾಯ ತಯಾರಿಸಿ, ದಿನಕ್ಕೆ ೩ ಬಾರಿ ಕುಡಿಯುವುದರಿಂದ ಅತಿಯಾದ ರಕ್ತಸ್ರಾವವನ್ನು ತಡೆಯಬಹುದು.

ನೆಲನೆಲ್ಲಿಯ ಎಲೆ, ಕೊಂಬೆ, ಕಾಯಿ, ಎಲ್ಲವನ್ನು ಕತ್ತರಿಸಿ ನೀರಿಗೆ ಹಾಕಬೇಕು, ನಂತರ ಅದಕ್ಕೆ ಅರ್ಧ ಇಂಚು ಶುಂಠಿಯನ್ನು ಜಜ್ಜಿ, ಮಾಡುತ್ತಿರುವ ಕಷಾಯಕ್ಕೆ ಹಾಕಬೇಕು, ನಂತರ ಕಾಲು ಚಮಚ ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿ, ಮಂದ ಉರಿಯಲ್ಲಿ ಕುದಿಸಬೇಕು. ಇಳಿಸುವಾಗ ಚಿಟಿಕೆ ಅರಿಶಿನ, ಸ್ವಲ್ಪ ಸೈ೦ಧವ ಲವಣ ಹಾಕಿ, ಒಂದು ನಿಮಿಷ ಬಿಟ್ಟು ಇಳಿಸಿ, ಸೋಸಿದರೆ, ಕಷಾಯ ಸಿದ್ದವಾಗುತ್ತದೆ. ಇದನ್ನು, ೧೦-೧೫ ಎಂ,ಎಲ್ ನಷ್ಟನ್ನು ಘಂಟೆಗೊಮ್ಮೆ ಕುಡಿಯುತ್ತ ಬಂದರೆ ಇದು ಎಲ್ಲ ರೀತಿಯ ಜ್ವರಕ್ಕೂ ರಾಮಬಾಣವಾಗಿದೆ.ನೆಲನೆಲ್ಲಿಯ ಕಷಾಯ ಮಾಡಿ, ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.ಕಿಡ್ನಿಯ ಕಲ್ಲು ಕರಗಿಸುವಲ್ಲಿ ನೆಲನೆಲ್ಲಿಯ ಪಾತ್ರ ಮಹತ್ವದ್ದು, . ನೆಲನೆಲ್ಲಿಯ ಜ್ಯೂಸ್ ಮಾಡಿ ಸೇವಿಸುವುದರಿಂದ ಕಿಡ್ನಿಯ ಕಲ್ಲು ನಿಧಾನವಾಗಿ ಕರಗುತ್ತಾ ಬರುತ್ತದೆ


ನಾಚಿಕೆ ಮುಳ್ಳು 

ಇದನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಸಸ್ಯ ಶಾಸ್ತ್ರದಲ್ಲಿ ಮಿಮೋಸ ಪುಡಿಕಾ ಲಿನ್ನ್  ಎಂಬ ಹೆಸರು ಹೊಂದಿದ್ದು,  ಕನ್ನಡದಲ್ಲಿ `ನಾಚಿಕೆ ಮುಳ್ಳು ಅಥವಾ ಮುಟ್ಟಿದರೆ ಮುನಿ , ಹಿಂದಿಯಲ್ಲಿ `ಲಾಜ್‌ವಂತಿ~.ಮುಟ್ಟಿದರೆ ಮುನಿ ಗಿಡಕ್ಕೆ ಸಂಸ್ಕೃತದಲ್ಲಿ "ಅಂಜಲೀ ಕಾರಿಕೆ" ಎಂದು ಹೆಸರು.


 ಮನೆ ಔಷಧಿ ತಯಾರಿಕೆಗೆ ಬಹಳ ಉಪಯುಕ್ತವಾದುದು. ಗಂಟಲು ಬಾವು ಮತ್ತು ಇತರೆ ಬಾವುಗಳಿಂದ ತೊಂದರೆ ಅನುಭವಿಸುತ್ತಿರುವವರು ಇದರ ಕಾಂಡ, ಎಲೆಯನ್ನು ಚೆನ್ನಾಗಿ ಅರೆದು ಬಾವು ಆಗಿರುವ ಜಾಗದಲ್ಲಿ ಪಟ್ಟು ಹಾಕಬೇಕು.

ಈ ಗಿಡವನ್ನು (ಹೂ ರಹಿತ) ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯಮಾಡಿ ಕುಡಿದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಮೂಲವ್ಯಾದಿ(Piles) ಗುಣಮುಖವಾಗುತ್ತದೆ.ಮೂತ್ರ ಕೋಶದ ಕಲ್ಲು ನಿವಾರಣೆಯಲ್ಲಿ, ಮಹಿಳೆಯರ ಋತುಚಕ್ರ ಸರಾಗವಾಗಿ ಆಗುವಲ್ಲಿ, ಮೂಲವ್ಯಾಧಿ ಹಾಗೂ ಹಲ್ಲು ನೋವಿನ ನಿವಾರಣೆಯಲ್ಲಿ ಈ ಸಸ್ಯದ ಪಾತ್ರ ದೊಡ್ಡದು.ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ.


ಬಿಳಿ ಎಕ್ಕೆ


ಬಿಳಿ ಎಕ್ಕೆ ಗಿಡ ಹಲವು ರೋಗಗಳಿಗೆ ಹಾಗು ದೈಹಿಕ ಸಮಸ್ಯೆಗಳಿಗೆ ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ.

ಮೂಲವ್ಯಾದಿ ಸಮಸ್ಯೆ ಇರುವವರು ಎಕ್ಕದ ಹಾಲನ್ನು ಮೂಲವ್ಯಾಧಿಯ ಮೊಳಕೆಗೆ ಹಚ್ಚುವುದರಿಂದ ಮೂಲವ್ಯಾಧಿ ಪರಿಹಾರವಾಗುವುದು ಎಂದು ತಿಳಿಯಲಾಗುತ್ತದೆ. ಹಾಗು ಚರ್ಮಕ್ಕೆ ಸಂಬಂದಿಸಿದ ಕಾಯಿಲೆ ಇದ್ದರೆ ಎಕ್ಕದ ಹಾಲು ಹಾಗೂ ಜೇನು ತುಪ್ಪವನ್ನು ಬೆರೆಸಿ ಹಚ್ಚಬೇಕು.

ಯಾವುದೇ ರೀತಿಯ ವಿಷ ಜಂತುಗಳು ಕಡಿದರೆ ಎಕ್ಕದ ಬೇರನ್ನು ಅರಿಶಿನದಿಂದ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ಕರಗುವುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಎಕ್ಕದ ಆಹಾಲನ್ನು ಕಾಲುಗಳಲ್ಲಿ ಮುಳ್ಳು ಚುಚ್ಚಿದ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ.

ಎಕ್ಕೆ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನು ನೋವು, ಮಂಡಿನೋವು ಇರುವ ಕಡೆ ಶಾಕ ಕೊಟ್ಟರೆ ಕೆಲವೇ ದಿನದಲ್ಲಿ ಗುಣಮುಖರಾಗುತ್ತೇವೆ.

ಮುಖದ ಮೇಲೆ ಕಪ್ಪು ಚುಕ್ಕೆಗಳಿದ್ದರೆ, (ಬಂಗು) ಎಕ್ಕದ ಬೇರನ್ನು ನಿಂಬೇರಸದಲ್ಲಿ ತೇದು ಅದಕ್ಕೆ ಸ್ವಲ್ಪ ಅರಿಸಿನ ಸೇರಿಸಿ ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.


 ಒಂದೆಲಗ(ಬ್ರಾಹ್ಮೀ)


ಒಂದೆಲಗವು ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆಮಕ್ಕಳು ಪ್ರತಿದಿನ ಬೆಳಿಗ್ಗೆ 2 ರಿಂದ 3 ಒಂದೆಲಗ ಎಲೆಯನ್ನು ಹಸಿದ ಹೊಟ್ಟೆಯಲ್ಲಿ ತಿನ್ನಬೇಕು.

ಒಂದೆಲಗದ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ಅದರಿಂದ ರಸ ತೆಗೆದು ಅದನ್ನು ಜೇನುತುಪ್ಪದ ಜೊತೆ ಬೆರಸಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

ಕೆಲವರಿಗೆ ಬಾಣಂತನದ ಸಮಯದಲ್ಲಿ ಎದೆಹಾಲಿನ ಸಮಸ್ಯೆ ಉಂಟಾಗುತ್ತದೆ, ಆಗ ಒಂದೆಲಗದ ಎಲೆಯನ್ನು ಒಣಗಿಸಿ ಪುಡಿಮಾಡಿಕೊಂಡು ಆಕಳ ಹಾಲಿನೊಂದಿಗೆ ಜೀರಿಗೆ ಪುಡಿ ಮತ್ತು ಒಂದೆಲಗದ ಎಲೆಯ ಪುಡಿಯನ್ನು ಬೆರಸಿ ಸೇವಿಸುವುದರಿಂದ ಬಾಣಂತಿಯರಿಗೆ ಎದೆ ಹಾಲು ವೃದ್ಧಿಸುತ್ತದೆ.

ಕೆಲವರಿಗೆ ಮೂತ್ರ ಮಾಡುವಾಗ ಉರಿ ಕಾಣಿಸಿಕೊಂಡಾಗ ಮತ್ತು ಮೂತ್ರದಲ್ಲಿ ಇನ್ಫೆಕ್ಷನ್ ಆದಾಗ ಒಂದೆಲಗದ ರಸ 4 ಚಮಚ, ಕೊತ್ತಂಬರಿ ಬೀಜದ ಪುಡಿ 1/2 ಚಮಚವನ್ನು ಎಳೆನೀರಿಗೆ ಬೆರಸಿ ಕುಡಿಯುವುದರಿಂದ ಉರಿಮೂತ್ರ ಮತ್ತು ಮೂತ್ರದಲ್ಲಿನ ಇನ್ಫೆಕ್ಷನ್ ಕಡಿಮೆಯಾಗುವುದು.

ಅಜೀರ್ಣದಿಂದ ಬಳಲುತ್ತಿರುವವರು ಪ್ರತಿದಿನ 4 ರಿಂದ 5 ಒಂದೆಲಗದ ಎಲೆಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಅಲ್ಲದೆ ಒಂದೆಲಗವು ರಕ್ತಹೀನತೆಯನ್ನು ನಿವಾರಿಸುತ್ತದೆ.

ಕೆಲವರಿಗೆ ತಲೆಯ ಹೊಟ್ಟಿನ ಸಮಸ್ಯೆ ಇರುತ್ತದೆ. ಇದರಿಂದ ತಳೆಯ ಕೂದಲು ಉದುರುತ್ತದೆ. ಮತ್ತು ತಲೆಯಲ್ಲಿ ಹೇನು ಆಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಒಂದೆಲಗದ ಎಲೆಯನ್ನು ಮತ್ತು ಬೇರನ್ನು ಅರೆದು ತಲೆಗೆ ಹಚ್ಚಿ, 2 ತಾಸು ಬಿಟ್ಟು ಸ್ನಾನ ಮಾಡುವುದರಿಂದ ತಲೆಯ ಹೊಟ್ಟನ್ನು, ಕೂದಲು ಉದುರುವುದನ್ನು ಮತ್ತು ಕೂದಲು ಸೀಳುವಿಕೆಯನ್ನು ಕಡಿಮೆ ಮಾಡಬಹುದು

ಕೆಲಸದ ಒತ್ತಡಗಳಿಂದ ನಿದ್ದೆ ಬರದೆ ಇದ್ದಾಗ ಒಂದೆಲಗದ ಎಲೆಯನ್ನು ಒಣಗಿಸಿ ಪುಡಿ ಮಾಡಿಕೊಂಡು ಅದರ ಜೊತೆಗೆ ಹುರಿದ ಗಸಗಸೆ ಇಟ್ಟುಕೊಂಡಿರಬೇಕು. ನಂತರ ಪ್ರತಿದಿನ ಬೆಳಿಗ್ಗೆ ಅದನ್ನು ಜೇನುತುಪ್ಪದೊಡನೆ ಸೇವಿಸಿದರೆ ನಿದ್ದೆಯ ಸಮಸ್ಯೆ ನಿವಾರಣೆಯಾಗುತ್ತದೆ. 

ಮತ್ತೊಂದು ವಿಧಾನ: ಒಂದೆಲಗದ ಎಲೆಯನ್ನು ಕೊಬ್ಬರಿ ಎಣ್ಣೆಯ ಜೊತೆ ಕುದಿಸಿ ಪ್ರತಿದಿನ ರಾತ್ರಿ ಮಲಗುವಾಗ ತಲೆಗೆ ಹಾಕಿಕೊಂಡು ಮಲಗುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ.

ದೇಹದಲ್ಲಿ ಹೆಚ್ಚಿನ ಉಷ್ಣಾಂಶ ಉಂಟಾದಾಗ ಒಂದೆಲಗದ ಎಲೆಯನ್ನು ಬಳಸುವುದರಿಂದ ದೇಹವನ್ನು ತಂಪಾಗಿಸಬಹುದು. ಎಳ್ಳು, ಒಂದು ಹಸಿಮೆಣಸು, ಸ್ವಲ್ಪತೆಂಗಿನ ತುರಿಯನ್ನು ಸ್ವಲ್ಪ ಎಣ್ಣೆ ಸೇರಿಸಿ ಹುರಿಯಬೇಕು. ನಂತರ ಒಂದೆಲಗದ ಎಲೆಯನ್ನು ಸ್ವಲ್ಪ ಬಾಣಲೆಯಲ್ಲಿ ಅದರ ಹಸಿ ವಾಸನೆ ಹೋಗುವಷ್ಟು ಹುರಿಯಬೇಕು. ನಂತರ ಮಿಕ್ಸಿಗೆ ಹಾಕಿ ರುಬ್ಬಿ ಆ ಮಸಾಲೆಗೆ ಸಾಸಿವೆ, ಉದ್ದಿನ ಬೇಳೆ, ಒಂದು ಒಣಮೆಣಸು, 3 ರಿಂದ 4 ಬೆಳ್ಳುಳ್ಳಿ ಹಾಕಿ ಒಗ್ಗರಣೆ ತಯಾರಿಸಿ ಹಾಕಬೇಕು ಇದನ್ನು ಒಂದೆಲಗದ ತಂಬುಳಿ ಎಂದು ಕೆರೆಯುತ್ತಾರೆ. ನಂತರ ಅದನ್ನು ಅನ್ನದ ಜೊತೆ ಸವಿದರೆ ದೇಹವು ತಂಪಾಗಿರಲು ಸಹಾಯಮಾಡುತ್ತದೆ.

ಒಂದೆಲಗದ ಹಸಿ ಎಲೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ನಿರಂತರವಾಗಿ ಸೇವಿಸುವುದರಿಂದ ಅಥವಾ ಒಂದೆಲಗ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ತಲೆನೋವು, ಆತಂಕ ಮತ್ತು ಒತ್ತಡವನ್ನು ದೂರಗೊಳಿಸಬಹುದು.

ಮಲಬದ್ಧತೆ ಇದ್ದವರು ಪ್ರತಿದಿನ ಆಹಾರದಲ್ಲಿ ಒಂದೆಲಗವನ್ನು ಬಳಸುವುದರಿಂದ ಸಹಾಯವಾಗುವುದು.

ಪ್ರ ತಿದಿನ 4 ರಿಂದ 5 ಒಂದೆಲಗದ ಹಸಿ ಎಲೆಯನ್ನು ಜಗಿದು ತಿಂದು ನೀರು ಕುಡಿಯುವುದರಿಂದ ಮಾತಿನಲ್ಲಿ ಉಗ್ಗುವಿಕೆಯನ್ನು ಕಡಿಮೆಗೊಳಿಸಬಹುದು.

ಒಂದೆಲಗದಿಂದ ಮಧುಮೇಹ ನಿಯಂತ್ರಿಸಬಹುದು

ಸಾಮಾನ್ಯವಾದ ಆರೋಗ್ಯ ತೊಂದರೆಗಳಾದ ಶೀತ, ಜ್ವರ, ಕೆಮ್ಮು ಇವುಗಳಿಂದ ದೂರವಿರಲು ಒಂದೆಲಗದ ರಸವನ್ನು ಸೇವಿಸುವುದರಿಂದ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಒಂದೆಲಗದ ಎಲೆ ಮತ್ತು ದೂರ್ವೆ(ಗರಿಕೆ ಹುಲ್ಲು), ಬೆಲ್ಲ, ಕಾಳು ಮೆಣಸು ಹಾಕಿ ಕಷಾಯ ಮಾಡಿ ಸೇವಿಸುವುದರಿಂದ ಜ್ವರವನ್ನು ಕಡಿಮೆಗೊಳಿಸಬಹುದು. ಮತ್ತು ಒಂದೆಲಗದ ರಸವನ್ನು ಪ್ರತಿದಿನ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.


ಕಹಿ ಬೇವು


ಆರೋಗ್ಯ ಕ್ಕಾಗಿ  ಬೇವು, ಬೇವಿನ ಹೂ,ಹಣ್ಣು  ಎಲೆ, ತೊಗಟೆ, ಬೇರು ಎಲ್ಲಾ ಔಷದೀಯ  ಗುಣ  ಗಳಿಂದ  ಕೂಡಿದೆ,  


ಮಕ್ಕಳಿಗೆ, ದಡಾರ,  ಅಮ್ಮಾ ಏಳುವುದು  ಆದಾಗ ಬೇವಿನ ಸೊಪ್ಪು ಅರಿಶಿನ ಪುಡಿ ಸೇರಿಸಿ ಪೇಸ್ಟ್ ತರ ಅರೆದು  ಮೈಗೆ  ತಲೆಗೆ  ಹಚ್ಚಿ  ಬಿಡ ಬೇಕು,  ನಿಧಾನವಾಗಿ  ಹದವಾದ  ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು.ಬೇವಿನ ಮರದ ತೊಗಟೆಯ  ಒಳ ಪದರದಿಂದ ಕಷಾಯ ಮಾಡಿ,  ಗಾಯ ತೊಳೆದರೆ  ಸಕ್ಕರೆ  ಖಾಯಲೆ ಇರುವವರಿಗೆ  ಆಗುವ ಗಾಯ, ಬೇಗನೆ  ವಾಸಿಯಾಗತ್ತದೆ,  ಆರಂಭದ  ಹಂತದಲ್ಲಿ  ಇರುವ ಗ್ಯಾಂಗ್ಲಿನ್  ಸಹ ವಾಸಿಯಾಗತ್ತದೆ.


ಬೇವಿನ  ಕಡ್ಡಿ  ಕಚ್ಚಿ  ಬ್ರಶ್  ಮಾಡಿ  ಕೊಂಡು  ನಮ್ಮ ಪೂರ್ವಜರು  ಹಲ್ಲು  ಸ್ವಚ್ಛ ಮಾಡುತ್ತಾ ಇದ್ದರು. ಅವರಿಗೆ  ಹಲ್ಲಿನ  ಸಮಸ್ಯೆಗಳು  ಬರುತ್ತಾನೆ ಇರಲಿಲ್ಲ. 


ಬೇವಿನ  ಸೊಪ್ಪು ರಸ ತಲೆಗೆ  ಹಚ್ಚಿ  ಸ್ನಾನ ಮಾಡಿದರೆ ತಲೆ ಹೊಟ್ಟು, ಹೇನು ಎಲ್ಲಾ  ಮಾಯವಾಗುತ್ತಿದೆ. ಬೇವು, ಚರ್ಮ ಕ್ಕೆ, ಮೂಳೆ ಗೆ, ಕೂದಲಿಗೆ,  ಹಲ್ಲಿನ ಆರೋಗ್ಯಕ್ಕೆ,  ಉತ್ತಮ ವಾದುದು. 


 ಮದಗುಣಿಕೆ ,ದತ್ತೂರಿ ಅಥವಾ  ಉಮ್ಮತ್ತದ ಗಿಡ


 ಕೋಲ್ಡ್ ಪ್ರಕೃತಿಯ ಅಭಾಲ ವೃದ್ಧ ರಿಗೂ ಬರಬಹುದಾದ ಕೆಪ್ಪಟರಾಯ್ ಅಥವಾ ಕಪಾಲಗುರವನ್ನು ತಡೆದು ಕೊಳ್ಳಲು ಆಗದೆ ಹಲ್ಲು ನೋವೋ,ತಲೆನೋವೋ,ಕಿವಿ ನೋವೋ ಏನಾಗುತ್ತಿದೆ ಎಂದು ಊಹಿಸಲೂ ಕಷ್ಠ ಇದರ ಭಾದೆ. ಟಾರ್ಚ್ ಸಹಾಯದಿಂದ ನೋಡಿದರೆ ಕಿವಿಯಲ್ಲಿ ಬಿಳಿ ಬಣ್ಣದ ಏನೋ ಒಂಥರಾ ಇದೆ ಅಂತ ತಿಳಿಯುತ್ತದೆ. ಇದಕ್ಕೆ ಈ ಗಿಡದ ಎಲೆಗಳೇ ರಾಮ ಬಾಣ.ಇದರ ಎಲೆಗಳನ್ನು ಸ್ವಲ್ಪ ಬಿಸಿ ಮಾಡಿ ರಸತೆಗೆದು ನಿಂಬೆರಸ (ದೊಡ್ಲಿ ಹುಳಿ ಒಳ್ಳೆಯದು)ಸ್ವಲ್ಪ ಹಾಕಿ ಸಣ್ಣ ಮಣ್ಣಿನ ಮಡಿಕೆಯಲ್ಲಿ ಸೇರಿಸಿ ಬಿಸಿ ಮಾಡಿ ಬೆಚ್ಚನೆಯ ರಸವನ್ನು ಕಪಾಲ ಮತ್ತು ಗದ್ದಕ್ಕೆಗಂಟೆಗೆ ಒಮ್ಮೆ ಹಚ್ಚಿ .ಒಂದು ಚಮಚ ನೀರಿನಲ್ಲಿ ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಕಿವಿಯಲ್ಲಿ ಹಾಕಿ ತಕ್ಷಣ ಬಗ್ಗಿ ಹೊರಹಾಕಿ.ಇದರಿಂದ ನೋವು ಗುಣವಾಗುತ್ತದೆ. ನಂತರ ಕಿವಿಗೆ ತುಳಸಿಯನ್ನು ಮತ್ತು ಕೊಬ್ಬರಿ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಬೇಯಿಸಿ ಗರಿಗರಿಯಾದ ನಂತರ ಸೋಸಿ ಗಾಜಿನ ಬಾಟಲಿಯಲ್ಲಿ ಹಾಕಿ .ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಸ್ವಲ್ಪ ಬೆಚ್ಚಗೆ ಮಾಡಿ ಬಿಡಿ. ಕಾಯಿಲೆ ಮತ್ತೆ ಬರುವುದಿಲ್ಲ.


ಪುನರ್ನವ


ಪುನನ೯ವ ಸಾಂಪ್ರದಾಯಿಕ ಆಯುರ್ವೇದ ಸಸ್ಯವಾಗಿದ್ದು  ಬಳಸಲಾಗುತ್ತದೆ. ಒಟ್ಟಾರೆಯಾಗಿ ಸಸ್ಯವನ್ನು ಸಂಧಿವಾತ, ಜ್ವರ , ಎಡಿಮಾ, ಕಣ್ಣಿನ ಸಮಸ್ಯೆಗಳು, ಹೊಟ್ಟೆಯ ಸಮಸ್ಯೆಗಳು ಮತ್ತು ಯಕೃತ್ತಿನ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.


ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುವಲ್ಲಿ, ಹೃದಯದ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ, ದೃಷ್ಟಿ ಸುಧಾರಿಸುವಲ್ಲಿ ಮತ್ತು ಮಧುಮೇಹ, ಮೂತ್ರನಾಳದ ಸೋಂಕು, ಸಂಧಿವಾತ, ದುರ್ಬಲತೆ, ಗೌಟ್ ಮತ್ತು ರಕ್ತಹೀನತೆಯಂತಹ ರೋಗಗಳನ್ನು ತಡೆಗಟ್ಟುವಲ್ಲಿ ಪುನರ್ನವ ಹೆಚ್ಚಿನ ಮಹತ್ವವನ್ನು ಹೊಂದಿದೆ.


ಶಕ್ತಿಯುತವಾದ ನೋವು ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ, ಇದು ಕೀಲು ಮತ್ತು ಸ್ನಾಯು ನೋವನ್ನು ಕಡಿಮೆ ಮಾಡಲು ಅತ್ಯಂತ ಪ್ರಯೋಜನಕಾರಿಯಾಗಿದೆ, ಇದರಿಂದಾಗಿ ರುಮಟಾಯ್ಡ್ ಸಂಧಿವಾತದಂತಹ ದೀರ್ಘಕಾಲದ ಸ್ವಯಂ ನಿರೋಧಕ ಉರಿಯೂತದ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಮೂಲಿಕೆಯ ಎಲೆಗಳ ಪೇಸ್ಟ್ ನೋವು ಮತ್ತು ಉರಿಯೂತದಿಂದ ಪರಿಣಾಮಕಾರಿಯಾಗಿ ಪರಿಹಾರವನ್ನು ನೀಡುತ್ತದೆ.ಜೀರ್ಣಕ್ರಿಯೆಗೆ ಸಹಾಯಕ.


 ಮೂತ್ರ ವಿಸರ್ಜನೆ , ಮೂತ್ರಪಿಂಡದ ಕಲ್ಲುಗಳು ಮತ್ತು ನೋವಿನ ಮೂತ್ರ ವಿಸರ್ಜನೆಯನ್ನು ತಡೆಗಟ್ಟುವಲ್ಲಿ ಮತ್ತು ಚಿಕಿತ್ಸೆ ನೀಡುವಲ್ಲಿ ಪುನರ್ನವ ಪ್ರಮುಖ ಪಾತ್ರ ವಹಿಸುತ್ತದೆ .  ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.


ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ತೂಕವನ್ನು ನಿರ್ವಹಿಸುತ್ತದೆ.


ಇದು ಹೃದಯದ ವ್ಯವಸ್ಥೆಯನ್ನು ಸಡಿಲಗೊಳಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ,  ಇದು ಹೃದಯ ಸ್ನಾಯುಗಳನ್ನು ಬಲಪಡಿಸುವುದು, ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು ಹೃದಯಾಘಾತ, ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸಲು ಸಹಾಯಕವಾಗಿದೆ..


ಪುನರ್ನವವನ್ನು ಹಾಲು ಅಥವಾ ನೀರಿನ ಜೊತೆಗೆ ತೆಗೆದುಕೊಳ್ಳಬಹುದು ಅಥವಾ ಆಯುರ್ವೇದ ವೈದ್ಯರು ಸೂಚಿಸಿದಂತೆ ದಿನಕ್ಕೆ ಎರಡು ಬಾರಿ ಖಾಲಿ ಹೊಟ್ಟೆಯಲ್ಲಿ ಅಥವಾ ಊಟಕ್ಕೆ ಒಂದು ಗಂಟೆ ಮೊದಲು ತೆಗೆದುಕೊಳ್ಳಬಹುದು. ತಂಬಳಿ ಮಾಡಿಯೂ ಅನ್ನದೊಂದಿಗೆ ಸೇರಿಸಿ ಉಣ್ಣಬಹುದು.




.




Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು