ಚದುರಂಗ


 

 ಟಿಪ್ಪಣಿ :

ಚದುರಂಗದ ಆಟವನ್ನು ಭಾರತದಲ್ಲಿ ಕಂಡುಹಿಡಿಯಲಾಯಿತು. ಸುಮಾರು 7 ನೇ ಶತಮಾನದಲ್ಲಿ ಅವರು ಇದೇ ರೀತಿಯ ಆಟ ಆಡುತ್ತಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಇದು ನಮ್ಮ ಬುದ್ದಿಮತ್ತೆಗೆ ಸವಾಲಾದ ಆಟವಾಗಿದೆ. ಇದರಲ್ಲಿ ದೈಹಿಕ ಚಟುವಟಿಕೆಗಳಿಲ್ಲದೇ ಹೋದರೂ ಮಾನಸಿಕವಾಗಿ ಆಟಗಾರ ಬಹಳ ಗಟ್ಟಿಯಾಗಿರಬೇಕು. 


ವಿಷಯ ವಿವರಣೆ :


1924 ರಲ್ಲಿ ಪ್ಯಾರಿಸ್ ನಲ್ಲಿ  ವಿಶ್ವ ಚೆಸ್ ಸಂಸ್ಥೆ, ಅಥವಾ FIDE ಸ್ಥಾಪನೆಯಾದ ಬಳಿಕ ವಿಶ್ವದಾದ್ಯಂತ ಈ ಆಟ ಹರಡಲಾರಂಭಿಸಿತು. ನಂತರ 1966 ರಲ್ಲಿ ಚೆಸ್ ಸ್ಪರ್ಧೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಜುಲೈ 20 ರಂದು 'ವಿಶ್ವ ಚೆಸ್ ದಿನ' ಎಂಬ ಆಚರಣೆಯನ್ನು ಜಾರಿಗೆ ತರಲಾಯಿತು. ಅಂದಿನಿಂದ ಪ್ರತೀ ವರ್ಷ ಜುಲೈ 20 ನ್ನು 'ವಿಶ್ವ ಚೆಸ್ ದಿನ' ಎಂದು ಆಚರಿಸಲಾಗುತ್ತಿದೆ.


ಚದುರಂಗ ಮನುಷ್ಯನ ಮನೋಸಾಮರ್ಥ್ಯ‌ಕ್ಕೆ ವೇಗ ನೀಡುವ ವಿಶಿಷ್ಟ ಹಾಗೂ ವೈಜ್ಞಾನಿಕವಾದ ಆಟ.ಇಬ್ಬರು ಆಟಗಾರರಿ೦ದ ಆಡಲ್ಪಡುವ  ಆಟ  ಇದು- ಇದನ್ನು ೬೪ ಚೌಕಗಳಿರುವ ಮಣೆಯ ಮೇಲೆ ಆಡಲಾಗುತ್ತದೆ. ಮಣೆಯ ಮೇಲಿನ ಚೌಕಗಳು ಕಪ್ಪು ಮತ್ತು ಬಿಳುಪು ಬಣ್ಣಗಳಿಂದ ಕೂಡಿದ್ದು ಒಂದು ಕಪ್ಪು ಮತ್ತು ಒಂದು ಬಿಳಿ - ಹೀಗೆ ಜೋಡಿಸಲ್ಪಟ್ಟಿರುತ್ತವೆ. ಆಟದ ಪ್ರಾರಂಭದಲ್ಲಿ ಪ್ರತಿ ಆಟಗಾರನ ಬಳಿ ೧೬ ಕಾಯಿಗಳಿರುತ್ತವೆ -ಒಬ್ಬ ಆಟಗಾರನ ಕಾಯಿಗಳು ಸಾಮಾನ್ಯವಾಗಿ ಬಿಳಿ ಬಣ್ಣದವಾಗಿದ್ದು ಇನ್ನೊಬ್ಬ ಆಟಗಾರನವು ಕಪ್ಪು ಬಣ್ಣದವಾಗಿರುತ್ತವೆ.ಒಂದು ರಾಜ, ಒಂದು ರಾಣಿ, ಎರಡು ಆನೆ, ಎರಡು ಕುದುರೆ ಎರಡು ಒಂಟೆ ಮತ್ತು ಎಂಟು ಪದಾತಿಗಳು ಇರುತ್ತವೆ.ಪ್ರತಿ ಕಾಯಿಯೂ ಸಹ ನಿಯಮ ಪ್ರಕಾರ ಚಲಿಸಿ ಎದುರಾಳಿಯ ಕಾಯಿಗಳ ಮೇಲೆ ದಾಳಿ ನಡೆಸುತ್ತದೆ. ಆಟದ ಉದ್ದೇಶ ಎದುರಾಳಿಯ ರಾಜನ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಲಲು ಯಾವ ಚೌಕಗಳೂ ಇಲ್ಲದ ಹಾಗೆ ಮಾಡುವುದು - ಇದಕ್ಕೆ ಚೆಕ್‍ಮೇಟ್ ಎಂದು ಕರೆಯಲಾಗುತ್ತದೆ. ಈ ಆಟದ ಅಧಿಕೃತ ಉಸ್ತುವಾರಿ ನಡೆಸುವ ಸಂಸ್ಥೆ ಫಿಡೆ (FIDE). ವಿವಿಧ ದೇಶಗಳಲ್ಲಿ ಸಹ ಅನೇಕ ರಾಷ್ಟ್ರೀಯ ಸಂಸ್ಥೆಗಳು ಅಸ್ತಿತ್ವದಲ್ಲಿವೆ.


ಉಪಸಂಹಾರ:

  ಒಂದು ಮಗುವಿನ ಶಾರೀರಿಕ, ಸಾಮಾಜಿಕ, ಮಾನಸಿಕ ಮತ್ತು ಬೌದ್ಧಿಕ ವಿಕಾಸದಲ್ಲಿ ಆಟಗಳು ತುಂಬಾ ಉಪಯುಕ್ತವಾಗಿವೆ.ಮಕ್ಕಳು ಇತರ ಮಕ್ಕಳ ಜೊತೆ ಹೊಂದಿಕೊಂಡು ಹೋಗುವುದನ್ನು, ಅವರೊಂದಿಗೆ ಸಹಕರಿಸುವುದನ್ನು ಕಲಿತುಕೊಳ್ಳುತ್ತಾರೆ. ಎಲ್ಲರೊಂದಿಗೂ ಬೆರೆಯಲು ಕಲಿಯುತ್ತಾರೆ.ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಲು ಆಟಗಳು ಕಲಿಸುತ್ತವೆ. ಹಾಗೆಯೇ ಪರಾಭವಗೊಂಡಾಗ ಅದನ್ನೂ ನಗುಮುಖದಿಂದ ಎದುರಿಸಲು ಕಲಿಸುತ್ತವೆ.ಕಲ್ಪನಾ ಶಕ್ತಿಯ ವೃದ್ಧಿಯಾಗುತ್ತದೆ.ಬುದ್ಧಿ ಶಕ್ತಿ, ಜ್ಞಾಪಕ ಶಕ್ತಿ , ಆಲೋಚನ ಶಕ್ತಿ ಜಾಸ್ತಿಯಾಗುತ್ತದೆ.

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು