ಗಣಕಯಂತ್ರ

 ಪೀಠಿಕೆ:

ಗಣಕಯಂತ್ರ (ಕಂಪ್ಯೂಟರ್)ವು ಅತ್ಯಂತ ಪ್ರಭಾವಶಾಲಿಯಾದ ತಂತ್ರಜ್ಞಾನವಾಗಿದೆ,  ಇಂದಿನ ಜಗತ್ತಿನಲ್ಲಿ ಅತ್ಯಗತ್ಯ ಸಾಧನವಾಗಿದೆ.ಗಣಕಯಂತ್ರವು ಮಾಹಿತಿ ಸಂಗ್ರಹಣೆ, ಸಂಸ್ಕರಣೆ, ಪ್ರಸರಣ ಮತ್ತು ವಿಶ್ಲೇಷಣೆ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಇದರಲ್ಲಿದೆ ವಿವಿಧ ವಿಧಗಳು, ಅಂದರೆ ಡಿಜಿಟಲ್, ಅನಾಲಾಗ್, ಹೈಬ್ರಿಡ್, ಮತ್ತು ಸರ್ವರ್. ಇವುಗಳಲ್ಲಿ ಡಿಜಿಟಲ್ ಗಣಕಯಂತ್ರವನ್ನೇ ಸಾಮಾನ್ಯವಾಗಿ ಹೆಚ್ಚು ಬಳಸಲಾಗುತ್ತದೆ.

ವಿಷಯ ವಿವರಣೆ:

ಬಹಳ ಹಿಂದಿನ ಕಾಲದಲ್ಲಿ ಗಣಿತದ ಸರಳ ಲೆಕ್ಕಾಚಾರಗಳಿಗೆ ಚೀನಾದಲ್ಲಿ ಅಭಾಕಸ್ ಎಂಬ ಸಾಧನವನ್ನು ಬಳಕೆ ಮಾಡುತ್ತಿದ್ದರು.ಫ್ರಾನ್ಸ್‌ನ ಬ್ಲೆಸ್ ಪಾಸ್ಕಲ್ 1642 ರಲ್ಲಿ ಮೊದಲ ಮ್ಯಕಾನಿಕಲ್ ಕ್ಯಾಲ್ಕುಲೇಟರ್ ಅನ್ನು ಅಭಿವೃದ್ಧಿಪಡಿಸಿದರು. ಇದನ್ನು ಪಾಸ್ಕಲೈನ್ ಎಂದು ಕರೆಯಲಾಗುತ್ತದೆ,

19ನೇ ಶತಮಾನದ ವೇಳೆ, ಚಾರ್ಲ್ಸ್ ಬ್ಯಾಬೇಜ್ ಆಧುನಿಕ ಗಣಕಯಂತ್ರದ ತತ್ತ್ವವನ್ನು ಮೊದಲಿಗೆ ಪ್ರಸ್ತಾಪಿಸಿದರು. ಅವರು 1837 ರಲ್ಲಿ "ಅನಾಲಿಟಿಕಲ್ ಎಂಜಿನ್" ಅನ್ನು ವಿನ್ಯಾಸಗೊಳಿಸಿದರು, ಇದು ಇಂದು ನಾವು ಬಳಕೆ ಮಾಡುವ ಕಂಪ್ಯೂಟರ್‌ಗಳ ಮೂಲ ತತ್ವವಾಗಿದೆ. ಅದರಲ್ಲಿ ಅಂಕಗಣಿತ ಕಾರ್ಯಗಳನ್ನು ನಿರ್ವಹಿಸಲು ಉಪಯುಕ್ತವಾಗುವಂತಹ ಭಾಗಗಳಾದ ಮೆಮೊರಿ, ಪ್ರೊಸೆಸರ್, ಮತ್ತು ಕಂಟ್ರೋಲ್ ಯೂನಿಟ್ ಇತ್ಯಾದಿಗಳನ್ನು ಒಳಗೊಂಡಿತ್ತು.ಚಾರ್ಲ್ಸ್ ಬ್ಯಾಬೇಜ್ ಅವರ ಕೆಲಸದಲ್ಲಿ ಸಹಕರಿಸಿದ ಅಡಾ ಲವ್ಲೇಸ್ ಅವರನ್ನು ಪ್ರಥಮ "ಕೋಡರ್" ಎಂದು ಪರಿಗಣಿಸಲಾಗುತ್ತದೆ. ಅವರು ಬ್ಯಾಬೇಜ್ ಅವರ ಎಂಜಿನ್‌ನಲ್ಲಿ ಶ್ರೇಣೀಬದ್ಧವಾದ ಪ್ರೋಗ್ರಾಂಗಳನ್ನು ರಚಿಸಿದರು.

1940ರ ದಶಕದಲ್ಲಿ, ವಿಶ್ವದ ಮೊದಲ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ ಎನಿಲಾಗ್ (Electronic Numerical Integrator and Computer) ಅನ್ನು ನಿರ್ಮಿಸಲಾಯಿತು. ಇದರಲ್ಲಿ ಬಹು ದೊಡ್ಡ ಪ್ರಮಾಣದ ಗಣನೆಗಳನ್ನು ತ್ವರಿತವಾಗಿ ಮಾಡಬಹುದಾಗಿತ್ತು.1950 ಮತ್ತು 1960ರ ದಶಕಗಳಲ್ಲಿ, ಟ್ರಾಂಸಿಸ್ಟರ್ ಮತ್ತು ಇಂಟಗ್ರೇಟೆಡ್ ಸರ್ಕ್ಯೂಟ್‌ಗಳ ಬಳಕೆಯಿಂದ ಕಂಪ್ಯೂಟರ್‌ಗಳು ಹೆಚ್ಚು ಚಿಕ್ಕದಾಗಿ ಮತ್ತು ವೇಗವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.


ಗಣಕಯಂತ್ರದ ಉಪಯೋಗಗಳು:

1. ವಿದ್ಯಾಭ್ಯಾಸ: ಗಣಕಯಂತ್ರ ಶಿಕ್ಷಣ ಕ್ಷೇತ್ರದಲ್ಲಿ ಬಹುಮುಖ್ಯವಾಗಿ ಬಳಕೆಯಾಗುತ್ತಿದೆ. ವಿದ್ಯಾರ್ಥಿಗಳು ಇಂದಿನ ಜಾಗತೀಕರಣದಲ್ಲಿ ಅಧ್ಯಯನವನ್ನು ಸುಲಭವಾಗಿ ಗಣಕಯಂತ್ರದ ಸಹಾಯದಿಂದ ಮಾಡುತ್ತಾರೆ.

2. ವೈದ್ಯಕೀಯ: ವೈದ್ಯಕೀಯ ಕ್ಷೇತ್ರದಲ್ಲಿಯೂ ಗಣಕಯಂತ್ರದ ಬಳಕೆ ಗಣನೀಯವಾಗಿದೆ. ವೈದ್ಯರು ರೋಗಿಗಳ ಮಾಹಿತಿ ಸಂಗ್ರಹಿಸಲು, ಪರೀಕ್ಷಾ ಫಲಿತಾಂಶಗಳ ವಿಶ್ಲೇಷಣೆ ಮಾಡಲು ಹಾಗೂ ಶಸ್ತ್ರಚಿಕಿತ್ಸೆಗಳ ವೇಳಾಪಟ್ಟಿಯನ್ನು ರೂಪಿಸಲು ಗಣಕಯಂತ್ರದ ಬಳಕೆ ಮಾಡುತ್ತಾರೆ.

3. ವ್ಯಾಪಾರ: ಗಣಕಯಂತ್ರವು ಲೆಕ್ಕಚಾರ, ಖಾತೆಗಳ ನಿರ್ವಹಣೆ, ಆದಾಯ-ವೆಚ್ಚಗಳ ಹಂಚಿಕೆ ಸೇರಿದಂತೆ ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ.

4. ವಿನೋದಕ್ಕಾಗಿ:  ಚಿತ್ರ, ವೀಡಿಯೊ, ಸಂಗೀತ ಸೇರಿದಂತೆ ಹಲವಾರು ವಿನೋದಗಳು ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಿಸುತ್ತದೆ

5.ವಾಣಿಜ್ಯ ಕ್ಷೇತ್ರ: ಇ-ಕಾಮರ್ಸ್, ಆನ್‌ಲೈನ್ ಬ್ಯಾಂಕಿಂಗ್  ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ.

6. ವಿಜ್ಞಾನ ಗಣನೆ,ಸಂಶೋಧನೆ,ಡೇಟಾ ವಿಶ್ಲೇಷಣೆ ಗಳಲ್ಲೂ ಬಳಸುತ್ತಾರೆ.

 ಹೀಗೆ ಕಡಿಮೆ ಸಮಯದಲ್ಲಿ  ಮಾಹಿತಿ ಸಂಗ್ರಹಣೆ ಮತ್ತು  ವೇಗವಾಗಿ ಹಂಚಿಕೆ  ನಡೆಯುತ್ತದೆ.ಲೆಕ್ಕಾಚಾರದಲ್ಲಿ ತಪ್ಪು ಸಂಭಾವನೆ ಕಡಿಮೆಯಾಗುತ್ತದೆ. ಇಂಟರ್ನೆಟ್ ಮೂಲಕ ಜಾಗತಿಕ ಸಂಪರ್ಕವನ್ನು ಸ್ಥಾಪಿಸಲು ಸಾಧ್ಯವಾಗಿದೆ.

ಗಣಕಯಂತ್ರದಿಂದ ಕೆಲವೊಂದು ತೊಂದರೆಗಳು ಎದುರಾಗುತ್ತದೆ

  • ಗಣಕಯಂತ್ರದ ಅವಲಂಬನೆಯು ಮಾನವರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ 
  • ಡೇಟಾ ಸೆಕ್ಯುರಿಟಿ ಹಾಗೂ ಗೋಪ್ಯತೆಯ ಸಮಸ್ಯೆಗಳು.
  • ಅತಿಯಾದ ಬಳಕೆಯು ದೈಹಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

ಉಪಸಂಹಾರ:

ಗಣಕಯಂತ್ರವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ಇಂದು ಸಾಮಾನ್ಯ ಜನರಿಂದ ಹಿಡಿದು ಎಲ್ಲರಿಗೂ ಜಾಗತಿಕ ವ್ಯವಹಾರಗಳಿಗೆ  ಬಹುಮುಖ್ಯ ಸಾಧನವಾಗಿದೆ. ಅದರ ಸಮರ್ಥ ಮತ್ತು ಜವಾಬ್ದಾರಯುತ ಬಳಕೆಯಿಂದ, ಇದನ್ನು ಇನ್ನಷ್ಟು ಉಪಯುಕ್ತವಾಗಿ ಮತ್ತು ಸುರಕ್ಷಿತವಾಗಿ ಬಳಸಬಹುದು.

                                           - ಉಷಾ ಪ್ರಸಾದ್

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು