ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ರಾಗಿಯಿಂದ ರಾಗಿ ಮುದ್ದೆ, ರಾಗಿ ದೋಸೆ, ರಾಗಿ ರೊಟ್ಟಿ, ರಾಗಿ ಅಂಬಲಿ ಹೀಗೆ ನಾನಾ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಲಾಗುತ್ತದೆ. ರಾಗಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಅನೇಕ ಲಾಭಗಳಿವೆ.
ರಾಗಿಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು
1.ಮಲಬದ್ಧತೆ ಹಾಗೂ ಜೀರ್ಣಕ್ರಿಯೆ ಸುಧಾರಣೆ :
ರಾಗಿಯು ಹಸಿರು ಧಾನ್ಯಗಳಿಗಿಂತ ಹೆಚ್ಚು ಫೈಬರ್ ಹೊಂದಿದ್ದು, ಮಲಬದ್ಧತೆ ತಡೆಯಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸೊಪ್ಪಿನ ಜೊತೆಗೆ ರಾಗಿ ಮುದ್ದೆ ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ.
2. ಶೀತದಿಂದ ಮುಕ್ತಿ :
ರಾಗಿ ಹಿಟ್ಟು ಅರಸಿನಹುಡಿ ನೀಲಗಿರಿಯಲೆ ರಕೆಂಡದ ಮೇಲೆ ಹಾಕಿ ಐದು 10 ನಿಮಿಷಗಳ ಕಾಲ ಅದರಿಂದ ಬರುವ ಹೊಗೆ ಸೇವಿಸುವುದರಿಂದ ಶೀತ ಹಾಗು ನೆಗಡಿ ನಿವಾರಣೆಯಾಗುತ್ತದೆ
3.ಪಿತ್ತ ನಿವಾರಣೆ:
ರಾಗಿಯನ್ನು ನೆನೆಸಿಹಾಕಿ ಅದು ಮುದ್ದೆ ಇರುವಾಗಲೇ ಸ್ವಲ್ಪ ಸ್ವಲ್ಪ ಬಾಣಲೆಯಲ್ಲಿ ಹಾಕಿ ಹುರಿದರೆ ಅದು ಹರಳಾಗುತ್ತದೆ ಈ ಹರಳನ್ನು ಬಿಸಿ ಮಾಡಿಕೊಂಡು ಅದಕ್ಕೆ ತೆಂಗಿನಕಾಯಿ ಮತ್ತು ಬೆಲ್ಲ ಹಾಕಿ ತಿಂದರೆ ಪಿತ್ತ ನಿವಾರಣೆಯಾಗುತ್ತದೆ ಹಾಗೂ ದೇಹ ಬೇಗ ತಂಪಾಗುತ್ತದೆ
ಹುಣಸೆಹಣ್ಣು ಕಿವುಚಿದ ನೀರಿಗೆ ಬೆಲ್ಲದ ಪುಡಿ ಹುರಿದ ರಾಗಿ ಹಿಟ್ಟನ್ನು ಹಾಕಿ ಕಲಸಿ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ತಿಂದರೆ ಪಿತ್ತ ಕಡಿಮೆಯಾಗುತ್ತದೆ
4. ದೇಹದ ತಂಪಿಗೆ :
ರಾಗಿ ಅಂಬಲಿಯನ್ನು ಪ್ರತಿದಿನ ಕುಡಿಯುವುದರಿಂದ ದೇಹ ತಂಪಾಗುತ್ತದೆ ಮತ್ತು ಪೋಷಕಾಂಶಗಳು ಪೂರೈಸುತ್ತವೆ.
ರಾಗಿ ಹಿಟ್ಟಿನಿಂದ ದೋಸೆ ಅಥವಾ ಇಡ್ಲಿ ತಯಾರಿಸಿ ತಿಂದರೂ ದೇಹ ತಂಪಾಗಿರುತ್ತದೆ.
5.ಎದೆ ಹಾಲು ಹೆಚ್ಚಾಗಲು :
ಹಾಲು ಕಡಿಮೆಯಿರುವ ಮಹಿಳೆಯರು ರಾಗಿಯೊಂದಿಗೆ ಬೆಲ್ಲ ಮತ್ತು ಕೊಬ್ಬರಿ ಸೇರಿಸಿ ತಿಂದರೆ ಸಹಾಯಕವಾಗುತ್ತದೆ.
6. ಮಧುಮೇಹ ನಿಯಂತ್ರಣ:
ಹೈ ಫೈಬರ್ ಮತ್ತು ಪಾಲಿಫಿನಾಲ್ ಇರುವ ಕಾರಣ, ರಾಗಿ ಟೈಪ್ 2 ಡಯಾಬಿಟೀಸನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ರಾಗಿ ತೆನೆ ಹುರಿದು ತಿನ್ನುವುದರಿಂದಲೂ ಮಧುಮೇಹ ಮತ್ತು ಉಬ್ಬಸದ ತೊಂದರೆ ಕಡಿಮೆಯಾಗುತ್ತದೆ.
7. ಮೂಳೆ ಮತ್ತು ಹಲ್ಲುಗಳ ಸದೃಢತೆ:
ರಾಗಿಯಲ್ಲಿ ಹೆಚ್ಚು ಕ್ಯಾಲ್ಶಿಯಂ ಇರುವುದರಿಂದ ಮೂಳೆ ಮತ್ತು ಹಲ್ಲುಗಳ ಸದೃಢತೆಗೆ ನೆರವಾಗುತ್ತದೆ.
ಮಕ್ಕಳಿಗೆ ರಾಗಿ ಮಾಲ್ಟ್ ಕೊಡುವುದರಿಂದಲೂ ಮೂಳೆಗಳು ಗಟ್ಟಿಯಾಗುತ್ತದೆ
ರಾಗಿ ಹಿಟ್ಟಿನಲ್ಲಿ ಸ್ವಲ್ಪ ಉಪ್ಪು ಹಾಕಿ ಹಲ್ಲು ಉಜ್ಜಿದರೆ ಗಟ್ಟಿತನ ಹೆಚ್ಚುತ್ತದೆ ಮತ್ತು ಹಲ್ಲು ಆರೋಗ್ಯಕರವಾಗುತ್ತವೆ.
8.ತೂಕ ಇಳಿಕೆ:
ರಾಗಿಯಲ್ಲಿ ತೂಕ ಇಳಿಕೆಗೆ ನೆರವಾಗುವ ಅತಿ ಕಡಿಮೆ ಫ್ಯಾಟ್ ಮತ್ತು ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆ್ಯಸಿಡ್ ಇರುವುದರಿಂದ ಹಸಿವು ನಿಯಂತ್ರಿಸುತ್ತದೆ.
9.ನಿದ್ರಾಹೀನತೆ ಮತ್ತು ಖಿನ್ನತೆ ನಿವಾರಣೆ:
ರಾಗಿಯಲ್ಲಿರುವ ಅಮೈನೋ ಆ್ಯಸಿಡ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಆತಂಕ, ಖಿನ್ನತೆ, ಮತ್ತು ನಿದ್ರಾಹೀನತೆ ನಿವಾರಣೆ ಮಾಡುತ್ತವೆ.
10. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ:
ರಾಗಿಯಲ್ಲಿರುವ ಪೋಷಕಾಂಶಗಳು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯಾಘಾತದ ಅಪಾಯ ತಡೆಯುತ್ತವೆ.
11.ಕ್ಯಾನ್ಸರ್ ತಡೆಗಟ್ಟಲು:
ಕರುಳು ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ರಾಗಿ ಸೇವನೆಯಿಂದ ತಡೆಯಬಹುದು.