ಉರಿ ಮೂತ್ರದ ಲಕ್ಷಣಗಳು:
ಪದೇ ಪದೇ ಮೂತ್ರ ವಿಸರ್ಜನೆ
ಮೂತ್ರ ವಿಸರ್ಜನೆಯಲ್ಲಿ ಉರಿ ಮತ್ತು ನೋವು
ಕಿಬ್ಬೊಟ್ಟೆಯಲ್ಲಿ ನೋವು
ಜ್ವರ
ಮೂತ್ರ ವಿಸರ್ಜನೆಯಲ್ಲಿ ರಕ್ತ ಹೋಗುವ ಸಾಧ್ಯತೆ.
ಮನೆ ಮದ್ದುಗಳಿಂದ ಪರಿಹಾರಗಳು:
1/2 ಲೀ ಬೆಚ್ಚಗಿನ ನೀರಿಗೆ 1/2 ಹೋಳು ಲಿಂಬು ರಸ ಸೇರಿಸಿ ದಿನಕ್ಕೆ 2 ಸಲ ನಿಧಾನವಾಗಿ ಕುಡಿಯಿರಿ , 2--3 ದಿವಸದ ಸೇವನೆಯಿಂದ ಪರಿಹಾರವಾಗುತ್ತದೆ,
ಪ್ರತಿದಿನ ಒಂದರಿಂದ ಎರಡು ಲೀಟರ್ ನಷ್ಟು ಬಾರ್ಲಿ ನೀರು ಕುಡಿಯುವುದರಿಂದ ಕಡಿಮೆಯಾಗುತ್ತದೆ
ಪ್ರತಿ ದಿನ ಒಂದು ಬೌಲ್ ಪ್ರಮಾಣದಲ್ಲಿ ಅನಾನಸು ಹಣ್ಣನ್ನು ಸೇವಿಸುವುದರಿಂದ ಉರಿ ಮೂತ್ರ ಮಾಯವಾಗುತ್ತದೆ
ಅಲೋವೇರ ಜಲ್ ಮತ್ತು ಕಲ್ಲು ಸಕ್ಕರೆ ಮಿಕ್ಸ್ ಮಾಡಿ ತಿನ್ನಬೇಕು
ಕೊನೆಯ ಸಲ ಅಕ್ಕಿತೊಳೆದ ನೀರಿಗೆ ಸ್ವಲ್ಪ ಕಲ್ಲುಸಕ್ಕರೆಪುಡಿ ಹಾಕಿ ಒಂದು ಲೋಟದಷ್ಟು ಕುಡಿದರೆ ವಾಸಿ ಆಗುತ್ತದೆ.
ಬೂದು ಕುಂಬಳಕಾಯಿ ಜ್ಯೂಸ್. ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯಿರಿ
ಜೀರಿಗೆ ಹಾಗೂ ಕೊತ್ತಂಬರಿ ಹುರಿದು ಪುಡಿ ಮಾಡಿ ಕಷಾಯವನ್ನು ಮಾಡಿ ಸ್ವಲ್ಪ ಬೆಲ್ಲ ಹಾಕಿ ಸೇವಿಸಿದರೆ ಒಳ್ಳೆಯದು
ಒಂದು ಚಮಚ ಕೊತ್ತಂಬರಿ ಮತ್ತು ಒಂದು ಚಮಚ ಜೀರಿಗೆಯನ್ನು ಹಾಗೆಯೇ ಪುಡಿ ಮಾಡಿ ಒಂದು ಗ್ಲಾಸ್ ನೀರಿಗೆ ಹಾಕಿ,ನಂತರ ಕೆಂಪು ಕಲ್ಲು ಸಕ್ಕರೆಯನ್ನು ಸೇರಿಸಿ . ಇದನ್ನು ಒಂದು ಗಂಟೆಯ ನಂತರ ಸೋಸಿ ಕುಡಿಯಿರಿ.
ಒಂದು ಚಮಚದಷ್ಟು ಕೊತ್ತಂಬರಿ ಬೀಜದ ಪುಡಿಯನ್ನು ಒಂದು ಗ್ಲಾಸ್ ತಣ್ಣಗಿನ ನೀರಿಗೆ ಹಾಕಿ ರಾತ್ರಿ ಇಡಿ ಇಟ್ಟು ,ಬೆಳಿಗ್ಗೆ ಸಣ್ಣ ತುಂಡು ಶುಂಠಿಯನ್ನು ಜಜ್ಜಿ ಸೇರಿಸಿ ಸೋಸಿ ಕುಡಿಯುವುದರಿಂದ ಉರಿಮೂತ್ರ ಸಮಸ್ಯೆಯು ವಾಸಿಯಾಗುತ್ತದೆ
ಬಾಳೆದಿಂಡಿನ ತಿರುಳಿನ ರಸ ತೆಗೆದು ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದಲೂ ಪರಿಹಾರವಾಗುತ್ತದೆ.ಇದು ಕಿಡ್ನಿ ಕಲ್ಲುಗಳು ಹಾಗೂ ಮೂತ್ರನಾಳದ ಸೋಂಕುಗಳಿಗೂ ಔಷಧಿಯಾಗಿದೆ
ದಿನಾ ಒಂದು ಎಳೆನೀರು ಕುಡಿದರೂ ಪರಿಹಾರವಾಗುತ್ತದೆ
ನೆಗ್ಗಿನ ಮುಳ್ಳನ್ನು ಕುಟ್ಟಿ ಪುಡಿ ಮಾಡಿ ಬಿಸಿ ನೀರಿಗೆ ಹಾಕಿ ಬೆಳಿಗ್ಗೆ ಕಲ್ಲು ಸಕ್ಕರೆ ಸೇರಿಸಿ ಕುಡಿದರೆ ನಿವಾರಣೆಯಾಗುತ್ತದೆ
ಒಂದು ಲೋಟ ಎಳೆನೀರಿಗೆ ಸ್ವಲ್ಪ ಬೆಲ್ಲ ಮತ್ತು ಸ್ವಲ್ಪ ಕೊತ್ತಂಬರಿ ಬೀಜದ ಚೂರ್ಣವನ್ನು ಸೇರಿಸಿ ದಿನಕ್ಕೆ ಎರಡು ಸಲ ಸೇವಿಸಿದರೆ ಉರಿ ಮೂತ್ರ ಕಡಿಮೆಯಾಗುತ್ತದೆ
ಅತ್ತಿ ಮರದ ಕೆತ್ತೆಯನ್ನು ಕಷಾಯ ಮಾಡಿ ಕುಡಿದರೂ ಉರಿ ಮೂತ್ರ ವಾಸಿಯಾಗುತ್ತದೆ.
ಕೊತ್ತಂಬರಿ ಸೊಪ್ಪಿನ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಉರಿಮೂತ್ರ ಗುಣವಾಗುವುದು.
ಗಮನಿಸಿ:ಶರೀರ ಪ್ರಕೃತಿಯನ್ನು ನೋಡಿಕೊಂಡು ವೈದ್ಯರ ಸಲಹೆ ಮೇರೆಗೆ ಸೇವನೆ ಮಾಡಿರಿ.