ಭಾರತದಲ್ಲಿ ಭಯೋತ್ಪಾದನ ಸಮಸ್ಯೆ

 


ಪೀಠಿಕೆ :ಭಯೋತ್ಪಾದನೆ ಎಂಬುದು ಸಮಾಜದಲ್ಲಿನ ಸಾಮಾಜಿಕ ವ್ಯವಸ್ಥೆ  ಏನಿದೆಯೋ, ಅದನ್ನು ಹಾಳು ಮಾಡಿ ಆ ಮೂಲಕ ಜನರಲ್ಲಿ ಹಿಂಸಾಚಾರದ ಭಯವನ್ನು ಸೃಷ್ಟಿಸುವುದಾಗಿದೆ. ಕಾನೂನುಬಾಹಿರ ಕೃತ್ಯಗಳಿಂದ ಸಮಾಜ ವಿರೋಧಿ ಕೃತ್ಯಗಳನ್ನು ಮಾಡುತ್ತಾ ದೇಶಕ್ಕೆ ಕಂಟಕವನ್ನು ಉಂಟು ಮಾಡುವುದೇ ಇದರ ಮುಖ್ಯ ಗುರಿಯಾಗಿದೆ.

ವಿಷಯ ವಿವರಣೆ :ಭಯೋತ್ಪಾದನೆ ಎಂಬುದು ಕೇವಲ ಒಂದು ಪದವಲ್ಲ ,ಇದು ಮಾನವ ಕುಲಕ್ಕೆ ಇರುವ ಒಂದು ದೊಡ್ಡ ಬೆದರಿಕೆಯಾಗಿದೆ. ಯಾವನೋ ವ್ಯಕ್ತಿ ಅಥವಾ ಗುಂಪು ಒಟ್ಟಾಗಿ ಎಲ್ಲೋ ಒಂದು ಕಡೆ ಹಿಂಸಾಚಾರ ಗಲಭೆ, ಕಳ್ಳತನ, ಅತ್ಯಾಚಾರ, ಅಪಹರಣ ,ಬಾಂಬ್ ಸ್ಪೋಟದಂತಹ ವಿದ್ವಾಂಸಕ ಕೃತ್ಯಗಳನ್ನು ಎಸಗಿದರೆ ಅದು ಭಯೋತ್ಪಾದನೆ ಎಂದೆನಿಸುತ್ತದೆ. ಬೇರೆ ದೇಶಗಳಿಗೆ ಹೋಲಿಸಿದಾಗ ಭಾರತವು ಅತಿ ಹೆಚ್ಚು ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಭಾರತದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ, ಪ್ರತ್ಯೇಕವಾದದ ಭಯೋತ್ಪಾದನೆ ಹಾಗೂ ಎಡಪಂಥೀಯ ಭಯೋತ್ಪಾದನೆ ಮುಖ್ಯವಾದುದಾಗಿದೆ .ಪಾಕ್ ಪ್ರಾಯೋಜಿತ ಭಯೋತ್ಪಾದನೆಯು ಭಾರತಕ್ಕೆ ದೊಡ್ಡ ಸವಾಲಾಗಿದೆ. ದಶಕಗಳ ಹಿಂದೆ ಜಮ್ಮು-ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿದ್ದ ಈ ಭಯೋತ್ಪಾದನೆಯು ಈಗ ದೇಶದಲ್ಲೆಡೆ ವ್ಯಾಪಿಸಿದೆ. ಪಾಕಿಸ್ತಾನವು ಜೈಷ - ಈ-ಮೊಹಮ್ಮದ್ ,ಲಷ್ಕರೆ - ಇ ತೊಯಿಬಾದಂತಹ ನೂರಾರು ಭಯೋತ್ಪಾದಕ ಸಂಘಟನೆಗಳನ್ನು ರಚಿಸಿ ಪಾಕಿಸ್ತಾನ ಹಾಗೂ ಬಾಂಗ್ಲಾ ಗಡಿಯಲ್ಲಿ ಜಿಹಾದ್ ಎನ್ನುವ ತರಬೇತಿ ಕೇಂದ್ರಗಳನ್ನು ತೆರೆದು ಸಾವಿರಾರು ಭಯೋತ್ಪಾದಕರಿಗೆ ತರಬೇತಿ ಹಣಕಾಸು ನೆರವು ಹಾಗೂ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಿ ಭಾರತದ ಗಡಿಯೊಳಗೆ ಅಕ್ರಮ ಪ್ರವೇಶ ಮಾಡಿಸಿ ನಮ್ಮ ಈ ದೇಶದಲ್ಲಿ ಭಯೋತ್ಪಾದನೆಯ ಕಿಚ್ಚನ್ನು ಹಚ್ಚುತ್ತಿದೆ. ಭಯೋತ್ಪಾದಕರನ್ನು ಭಾರತದಲ್ಲಿ ಮೊದಲು ನಕ್ಸಲೀಯರಂತೆ ನೋಡಲಾಯಿತು.ಮೊದಲ ಬಾರಿಗ 1967ರಲ್ಲಿ ಕೆಲವು ಉಗ್ರರು ಬಂಗಾಳ ಪ್ರದೇಶದಲ್ಲಿದ್ದರು. ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂಸೆ ಹಾಗೂ ಹೋರಾಟದ ಹಾದಿ ಹಿಡಿದು ನಕ್ಸಲರಾಗಿ ಕಾಣಿಸಿಕೊಂಡರು.  ಭಾರತವು ಇಲ್ಲಿಯ ತನಕ ಹಲವಾರು ಭಯೋತ್ಪಾದನಾ ದಾಳಿಗಳನ್ನು ಎದುರಿಸಿದೆ. ಅನೇಕ ಸೈನಿಕರು ಸಾಮಾನ್ಯ ಜನರು ಇವರ ದಾಳಿಗೆ ತುತ್ತಾಗಿದ್ದಾರೆ .2001ರಲ್ಲಿ ನಮ್ಮ ಪಾರ್ಲಿಮೆಂಟ್ ಹೌಸ್ ನ ಮೇಲೆ ಭಯೋತ್ಪಾದಕ ದಾಳಿ ನಡೆಯಿತು.2006ರಲ್ಲಿ ಮುಂಬೈ ರೈಲಿನಲ್ಲಿ ಬಾಂಬ್ ಸ್ಪೋಟಿಸಿ ಹಲವು ಅಮಾಯಕ ಜನರು ಸಾವನ್ನಪ್ಪಿದ್ದರು. 2008ರಲ್ಲಿ ಭಯೋತ್ಪಾದಕರು ಮುಂಬೈ ತಾಜ್ ಹೋಟೆಲ್ ಹಾಗೂ ಒಬೇರಾಯ್ ಗೆ ಪ್ರವೇಶಿಸಿ ಅಲ್ಲಿಯ ಜನರನ್ನು ಒತ್ತಯಾಳಾಗಿಸಿ ಅನೇಕರ ಜನರ ಸಾವಿಗೆ ಕಾರಣರಾದರು.ಅಲ್ಲಿ ಉಗ್ರಗಾಮಿ ಕಸಬ್ ಎಂಬತನನ್ನುಸೆರೆಹಿಡಿದು 2012 ರಲ್ಲಿ ಗಲ್ಲಿಗೇರಿಸಲಾಯಿತು. ಫೆಬ್ರವರಿ 14ರ 2019 ರಂದು ಭಾರತದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದು ಭಾರತದ ಹಲವು ಸೈನಿಕರು ವೀರ ಮರಣವನ್ನು ಹೊಂದಿದರು ಹಾಗೂ ಹಲವಾರು ಮಂದಿ ಗಾಯಗೊಂಡರು. ಕೂಡಲೇ ಭಾರತವು ಇದಕ್ಕೆ ಸರಿಯಾಗಿ ತನ್ನ ಪ್ರತಿಕಾರವನ್ನು ತೀರಿಸಿಕೊಂಡಿತು. ಹೀಗೆ ಭಾರತದಲ್ಲಿ ಮೇಲಿಂದ ಮೇಲೆ ಭಯೋತ್ಪಾದನೆಯ ಹೆಸರಿನಲ್ಲಿ ದಾಳಿಗಳು ನಡೆಯುತ್ತಲೇ ಇದೆ.  ಪ್ರತಿವರ್ಷ ಮೇ 21ರಂದು ಭಯೋತ್ಪಾದನೆ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. 

ಉಪಸಂಹಾರ:ಇಂದಿನ ಮಕ್ಕಳು ಮುಂದಿನ ಜನಾಂಗ ಎಂಬ ಮಾತಿನಂತೆ ಬಾಲ್ಯದಿಂದಲೇ ಸಂಸ್ಕಾರಯುತವಾದ ಉತ್ತಮ ಶಿಕ್ಷಣವನ್ನು ಮಕ್ಕಳು ಪಡೆದರೆ ಈ ಭಯೋತ್ಪಾದನೆಯಂತಹ ಹಲವು ಸಮಸ್ಯೆಗಳನ್ನು ನಿಯಂತ್ರಿಸಬಹುದು. ಇದನ್ನು ಮಟ್ಟ ಹಾಕಲು ಕೇವಲ ಒಂದು ದೇಶದಿಂದ ಮಾತ್ರ ಸಾಧ್ಯವಿಲ್ಲ. ಭಯೋತ್ಪಾದನೆ ಎಂಬುದು ವಿಶ್ವ ವ್ಯಾಪಿ ಸಮಸ್ಯೆಯಾದ ಕಾರಣ ಎಲ್ಲ ರಾಷ್ಟ್ರಗಳು ಒಗ್ಗಟ್ಟಿನಿಂದ ಒಂದಾಗಿ ಭಯೋತ್ಪಾದನೆಯ ವಿರುದ್ಧ ಸಮರ ಸಾರಿ ಜಯಿಸಬೇಕಿದೆ. ಅದರ ಬೇರನ್ನೇ ಕಿತ್ತೆಸೆದು ಆ ಮೂಲಕ ನಮ್ಮ ಸೈನಿಕರು ಹಾಗೂ ಅವರ ಕುಟುಂಬದವರು ಸೇರಿದಂತೆ ಪ್ರತಿಯೊಬ್ಬರೂ ನೆಮ್ಮದಿಯ ಜೀವನವನ್ನು ನಡೆಸುವಂತಾಗಬೇಕಿದೆ.

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು